alex Certify ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗಾಗಿ ಹೊಸ ಐಟಿ ನಿಯಮಾವಳಿ; ಹೈಕೋರ್ಟ್‌ ಗೆ ಕೇಂದ್ರದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗಾಗಿ ಹೊಸ ಐಟಿ ನಿಯಮಾವಳಿ; ಹೈಕೋರ್ಟ್‌ ಗೆ ಕೇಂದ್ರದಿಂದ ಮಹತ್ವದ ಮಾಹಿತಿ

2021ನೇ ಸಾಲಿನ ಐಟಿ ನಿಯಮಾವಳಿಗಳು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಬಗ್ಗೆ ಸ್ಪಷ್ಟ ಗಮನವನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್ ಗೆ​ ಮಾಹಿತಿಯನ್ನು ರವಾನಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್​. ಪಟೇಲ್​ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್​​ ನೇತೃತ್ವದ ಪೀಠಕ್ಕೆ ಅಫಿಡವಿಟ್​ ಸಲ್ಲಿಸಿದ ಕೇಂದ್ರ ಸರ್ಕಾರವು ಐಟಿ ಹೊಸ ನಿಯಮಾವಳಿಗಳು ಅಶ್ಲೀಲತೆ ಹಾಗೂ ಭೌತಿಕ ಗೌಪ್ಯತೆಯನ್ನು ಉಲ್ಲಂಘಿಸುವಂತಹ ವಿಷಯಗಳನ್ನು ತೆಗೆದು ಹಾಕಲಿದೆ ಎಂದು ಹೇಳಿದೆ.

‘ಐಟಿ ಹೊಸ ನಿಯಮಾವಳಿಗಳು ಕಂಪ್ಯೂಟರ್​ ಮೂಲಗಳಿಂದ ಅವನ ಅಥವಾ ಅವಳ ಘನತೆಯ ಮೇಲೆ ನಕರಾತ್ಮಾಕ ಪರಿಣಾಮ ಬೀರಬಲ್ಲ ಅಂಶಗಳನ್ನು ನಿಯಂತ್ರಿಸುತ್ತದೆ. 24 ಗಂಟೆಗಳ ಅವಧಿಯಲ್ಲಿ ವಿಷಯಗಳನ್ನು ಅಳಿಸಿ ಹಾಕುವುದರಿಂದ ಸೆನ್ಸಾರ್​ ಶಿಪ್​ ಆಗೋದಿಲ್ಲ. ಇದನ್ನು ಸೂಕ್ಷ್ಮವಾಗಿ ನೋಡಬೇಕು. ಹಾಗೂ ಇದೇ ನಮ್ಮ ಆದ್ಯತೆಯಾಗಿದೆʼ ಎಂದು ಕೇಂದ್ರ ಸರ್ಕಾರ ಹೇಳಿದೆ.

ಆನ್​ಲೈನ್​ನಲ್ಲಿ ಖಾಸಗಿ ದೃಶ್ಯಗಳು ಸೋರಿಕೆಯಾದ ಸಂದರ್ಭದಲ್ಲಿ ಸಂತ್ರಸ್ತರ ರಕ್ಷಣೆಗಾಗಿ ನಿಯಮ 3(2)(b) ಯನ್ನು ನೀಡಲಾಗಿದೆ. ಈ ನಿಯಮದಿಂದಾಗಿ ಕಂಪ್ಯೂಟರ್​​ ಮೂಲಗಳಲ್ಲಿ ಸಿಗುವ ಭಾಗಶಃ ನಗ್ನ ಚಿತ್ರಗಳನ್ನು ತೆಗೆದು ಹಾಕಲಾಗುತ್ತದೆ. ಸಂತ್ರಸ್ತರು ನೀಡಿದ ದೂರನ್ನು ಆಧರಿಸಿ ಬಳಕೆದಾರರ ವಾಕ್​ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...