alex Certify BIG NEWS: ಜಾಹೀರಾತು ನಿರ್ಮಾಣ, ಪ್ರಸಾರಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಾಹೀರಾತು ನಿರ್ಮಾಣ, ಪ್ರಸಾರಕ್ಕೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಕೇಂದ್ರ ಸರ್ಕಾರ ಜಾಹೀರಾತು ಪ್ರಕಟಣೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮತ್ತು ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ಅವರು Guidelines for Prevention of Misleading Advertisements and Endorsements for Misleading Advertisements, 2022 ಅನ್ನು ಬಿಡುಗಡೆ ಮಾಡಿದರು.

ಈ ಮಾರ್ಗಸೂಚಿಗಳ ಪ್ರಕಾರ, ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಅವರನ್ನು ಪ್ರಚೋದಿಸುವ ಬಾಡಿಗೆ ಜಾಹೀರಾತು ಮೇಲೆ ನಿಷೇಧ ಹೇರಲಾಗಿದೆ. ಈ ಸಂಬಂಧ ಜೂನ್ 9 ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಈ ಮಾರ್ಗಸೂಚಿಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಮಾದರಿಯ ಜಾಹೀರಾತುಗಳಿಗೆ ಈ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳ ಪ್ರಕಾರ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರದ ಜಾಹೀರಾತುಗಳನ್ನು ತಯಾರು ಮಾಡಬೇಕಾಗಿದೆ.

ಸರಕುಗಳು, ಉತ್ಪನ್ನ ಅಥವಾ ಸೇವೆಯು ಜಾಹೀರಾತಿನ ವಿಷಯವಾಗಿರುವ ತಯಾರಕ ಸಂಸ್ಥೆ, ಸೇವಾ ಪೂರೈಕೆದಾರ ಸಂಸ್ಥೆ ಅಥವಾ ವ್ಯಾಪಾರಿ ಅಥವಾ ಅಂತಹ ಸರಕುಗಳು, ಉತ್ಪನ್ನ ಅಥವಾ ಸೇವೆಯ ಜಾಹೀರಾತಿಗಾಗಿ ಸೇವೆಯನ್ನು ಪಡೆದಿರುವ ಜಾಹೀರಾತು ಸಂಸ್ಥೆ ಅಥವಾ ಅನುಮೋದಕರಿಗೆ ಈ ಮಾರ್ಗಸೂಚಿಗಳು ಅನ್ವಯವಾಗಲಿವೆ.

ಮಾರ್ಗಸೂಚಿಗಳ ಪ್ರಕಾರ, `ಬಾಡಿಗೆ ಜಾಹೀರಾತು’ ಎಂಬುದು ಸರಕು ಅಥವಾ ಸೇವೆಗಳ ಜಾಹೀರಾತನ್ನು ಉಲ್ಲೇಖಿಸುತ್ತದೆ. ಈ ಹಿನ್ನೆಲೆಯಲ್ಲಿ ಅದರ ಜಾಹೀರಾತನ್ನು ಕಾನೂನಿನಲ್ಲಿ ನಿಷೇಧಿಸಲಾಗಿದೆ ಅಥವಾ ನಿರ್ಬಂಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದ ಬಾಡಿಗೆ ಜಾಹೀರಾತು ಅಥವಾ ಪರೋಕ್ಷ ಜಾಹೀರಾತುಗಳನ್ನು ತಯಾರಿಸುವಂತಿಲ್ಲ ಮತ್ತು ಪ್ರಸಾರ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...