ನವದೆಹಲಿ: ದೇಶಿ ವಿಮಾನ ಪ್ರಯಾಣ ದರ ಶೇಕಡ 10 ರಿಂದ ಶೇಕಡ 30 ರಷ್ಟು ಹೆಚ್ಚಳ ಮಾಡಲಾಗಿದೆ. ತೈಲ ಬೆಲೆ ಸತತ ಏರಿಕೆ ಕಂಡಿದ್ದು, ಇದರ ಬೆನ್ನಲ್ಲೇ ವಿಮಾನ ಪ್ರಯಾಣ ದರ ಕೂಡ ಏರಿಕೆ ಮಾಡಿ ಸರ್ಕಾರ ದೇಶಿ ವಿಮಾನ ಪ್ರಯಾಣಿಕರಿಗೆ ಶಾಕ್ ನೀಡಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಿದ್ದು, ದೇಶಿಯ ವಿಮಾನ ಪ್ರಯಾಣ ದರಗಳನ್ನು ಕನಿಷ್ಠ ಶೇಕಡ 10 ಹಾಗೂ ಗರಿಷ್ಠ ಶೇಕಡ 30 ರಷ್ಟು ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ. ದೇಶಿಯ ಮಾರ್ಗದ ವಿಮಾನಗಳಲ್ಲಿ ವಿಧಿಸಲಾಗಿದ್ದ ಶೇಕಡ 80 ರಷ್ಟು ಸೀಟು ಸಾಮರ್ಥ್ಯ ಮಿತಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಲಾಗಿದೆ.