ಭಾರತ್ ಬ್ರಾಡ್‌ಬ್ಯಾಂಡ್ ನಿಗಮ ಲಿಮಿಟೆಡ್ (ಬಿಬಿಎನ್‌ಎಲ್)ಅನ್ನು ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ಜತೆ ವಿಲೀನಗೊಳಿಸುವ ದಿಸೆಯಲ್ಲಿ ಕೇಂದ್ರ ಸರಕಾರದ ಮಹತ್ವದ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಅಂದರೆ, ಇದೇ ತಿಂಗಳಲ್ಲಿ ವಿಲೀನಗೊಳಿಸುವ ಕುರಿತು ನಿರ್ಧಾರ ಹೊರಬೀಳಲಿದೆ.
ಇತ್ತೀಚೆಗೆ ಆಲ್ ಇಂಡಿಯಾ ಗ್ರ್ಯಾಜುಯೇಟ್ ಎಂಜಿನಿಯರ್ಸ್ ಆ್ಯಂಡ್ ಟೆಲಿಕಾಂ ಆಫೀಸರ್ಸ್ ಅಸೋಸಿಯೇಷನ್ (ಎಐಜಿಇಟಿಒಎ) ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಈ ಕುರಿತು ಬಿಎಸ್‌ಎನ್‌ಎಲ್ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಕೆ. ಪುರವರ್ ಅವರು ಮಾಹಿತಿ ನೀಡಿದ್ದು, ’ಸರಕಾರಿ ಒಡೆತನದ ಟೆಲಿಕಾಂ ಕಂಪನಿಯ ಏಳಿಗೆಗಾಗಿ ಬಿಬಿಎಲ್‌ಎಲ್ ಅನ್ನು ಬಿಎಸ್‌ಎನ್‌ಎಲ್ ಜತೆ ವಿಲೀನಗೊಳಿಸಲು ಚಿಂತನೆ ನಡೆದಿದೆ’ ಎಂದು ತಿಳಿಸಿದ್ದಾರೆ.
ಬೆಚ್ಚಿಬೀಳಿಸುವಂತಿದೆ ಹೋಳಿ ಹಬ್ಬದ ಸಂದರ್ಭದಲ್ಲಿ ನಡೆದ ದುರ್ಘಟನೆ
’ಸರಕಾರದ ಮಟ್ಟದಲ್ಲಿ ಈ ಕುರಿತು ಚಿಂತನೆ ನಡೆದಿದೆ. ಇದೇ ತಿಂಗಳಲ್ಲಿ ವಿಲೀನಗೊಳಿಸುವ ಕುರಿತು ಆದೇಶ ಹೊರಬೀಳಲಿದೆ. ವಿಲೀನಗೊಂಡ ಬಳಿಕ ಬಿಬಿಎನ್‌ಎಲ್ ಸಂಪೂರ್ಣವಾಗಿ ಬಿಎಸ್‌ಎನ್‌ಎಲ್ ಗೆ ಸೇರಲಿದೆ’ ಎಂದು ಹೇಳಿದ್ದಾರೆ. ಈ ಕುರಿತು ಕೇಂದ್ರ ಟೆಲಿಕಾಂ ಸಚಿವರ ಜತೆ ಪುರವರ್ ಅವರು ಒಂದು ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ.
ಬಿಎಸ್‌ಎನ್‌ಎಲ್ ಈಗಾಗಲೇ ದೇಶದಲ್ಲಿ 6.8 ಲಕ್ಷ ಕಿಲೋಮಿಟರ್ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಜಾಲವನ್ನು ಹೊಂದಿದೆ. ಪ್ರಸ್ತಾಪದಂತೆ ಬಿಬಿಎನ್‌ಎಲ್ ಸಹ ವಿಲೀನವಾದರೆ ದೇಶದ 1.85 ಲಕ್ಷ ಗ್ರಾಮ ಪಂಚಾಯಿತಿಗಳಿಗೆ 5.67 ಲಕ್ಷ ಕಿಲೋಮಿಟರ್‌ವರೆಗಿನ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕ ಕಲ್ಪಿಸುವ ಯೋಜನೆ ಸಿಗಲಿದೆ. ಹಾಗಾಗಿ ಬಿಬಿಎನ್‌ಎಲ್ ಹಾಗೂ ಬಿಎಸ್‌ಎನ್‌ಎಲ್ ವಿಲೀನವು ಮುಂದಿನ ದಿನಗಳಲ್ಲಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ, ಅದರಲ್ಲೂ ಆಪ್ಟಿಕಲ್ ಫೈಬರ್ ಕೇಬಲ್ ಸಂಪರ್ಕದಲ್ಲಿ ಕ್ರಾಂತಿಯಾಗಲಿದೆ ಎನ್ನಲಾಗುತ್ತಿದೆ.