alex Certify ಸ್ವಂತ ಸೂರು ಹೊಂದುವ ಕನಸು ಕಂಡ ರಾಜ್ಯದ ಜನತೆಗೆ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ಸೂರು ಹೊಂದುವ ಕನಸು ಕಂಡ ರಾಜ್ಯದ ಜನತೆಗೆ ಭರ್ಜರಿ ಗುಡ್‌ ನ್ಯೂಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮಾಂತರ (ಪಿಎಂಎವೈ-ಜಿ) ಅಭಿಯಾನದಡಿ ರಾಜ್ಯದಲ್ಲಿ 2.02 ಕೋಟಿ ಮನೆಗಳ ನಿರ್ಮಾಣ ಕೆಲಸವನ್ನು ಆಗಸ್ಟ್‌ 15, 2022ರ ಒಳಗಾಗಿ ಮಾಡಿ ಮುಗಿಸಲು ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಸೂಚಿಸಿರುವುದಾಗಿ ಕೇಂದ್ರ ಗ್ರಾಮೀಣಾಬೀವೃದ್ಧಿ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಯೋಜನೆಯಡಿ ನಿರ್ಮಾಣ ಮಾಡಲಾಗುವ ಎಲ್ಲಾ 2.95 ಕೋಟಿ ಮನೆಗಳನ್ನು ಮಾರ್ಚ್ 2024ರ ಒಳಗಾಗಿ ಕಟ್ಟಿ ಮುಗಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯ ಸಲಹೆ ನೀಡಿದೆ.

BIG NEWS: ಪಾನ್ ಮಸಾಲಾ ಕಂಪನಿ ಮೇಲೆ DGGI ದಾಳಿ; 150 ಕೋಟಿ ನಗದು ಹಣ ಪತ್ತೆ

ಮೇಲ್ಕಂಡ ಯೋಜನೆಯಡಿ, ಕರ್ನಾಟಕದಲ್ಲಿ 2019-20ನೇ ಸಾಲಿನಲ್ಲಿ 86,000 ಮನೆಗಳ ನಿರ್ಮಾಣ ಮತ್ತು 2020-21ರಲ್ಲಿ 1,51,715 ಮನೆಗಳನ್ನು ನಿರ್ಮಿಸಲು, ಶಾಶ್ವತ ಕಾಯುವಿಕೆ ಪಟ್ಟಿಯಲ್ಲಿರುವ ಫಲಾನುಭವಿಗಳ ಸಂಖ್ಯೆಯ ಅಧಾರದ ಮೇಲೆ ಸೂಚಿಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

ಆದರೆ, ಶಾಶ್ವತ ಕಾಯುವಿಕೆ ಪಟ್ಟಿಯಲ್ಲಿ ಅರ್ಹರಾಗಿರುವ ಕುಟುಂಬಗಳ ಸಂಖ್ಯೆ ಕಡಿಮೆ ಇರುವುದಾಗಿ ತಿಳಿಸಿದ್ದ ಕರ್ನಾಟಕ, ಮೇಲ್ಕಂಡ ಅಂಕಿಅಂಶಗಳ ಪರಿಷ್ಕರಣೆಗೆ ಕೋರಿತ್ತು.

ಎರಡನೇ ಹಂತದಲ್ಲಿ ಪರಿಷ್ಕೃತವಾದ ಗುರಿಯಾದ 42,267 ಮನೆಗಳ ನಿರ್ಮಾಣದ ಗುರಿಯೆದುರು, 36,920 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಮನೆಗಳ ಹಸ್ತಾಂತರ ಮಾಡಿದೆ. ಮೊದಲನೇ ಹಂತದ (2016-17 ರಿಂದ 2018-19) ವೇಳೆ ನಿಗದಿಯಾಗಿದ್ದ 1,24,088 ಮನೆಗಳ ಪೈಕಿ, 1,11,108 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...