alex Certify ಡ್ರಗ್ಸ್, ಮದ್ಯ ವೈಭವೀಕರಿಸುವ ಹಾಡು ಹಾಕದಂತೆ FM ರೇಡಿಯೊ ಚಾನೆಲ್ ಗಳಿಗೆ ಸರ್ಕಾರದ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಗ್ಸ್, ಮದ್ಯ ವೈಭವೀಕರಿಸುವ ಹಾಡು ಹಾಕದಂತೆ FM ರೇಡಿಯೊ ಚಾನೆಲ್ ಗಳಿಗೆ ಸರ್ಕಾರದ ಎಚ್ಚರಿಕೆ

ನವದೆಹಲಿ: ಮದ್ಯ, ಡ್ರಗ್ಸ್, ಆಯುಧ, ದರೋಡೆಕೋರ/ಗನ್ ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಪ್ಲೇ ಮಾಡದಂತೆ FM ರೇಡಿಯೋ ಚಾನೆಲ್‌ ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

FM ರೇಡಿಯೋ ಚಾನೆಲ್‌ ಗಳಿಗೆ ನೀಡಿದ ಸಲಹೆಯಲ್ಲಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅನುಮತಿ ಒಪ್ಪಂದ(GOPA) ಮತ್ತು ಅನುಮತಿ ಒಪ್ಪಂದದ ವಲಸೆ ಅನುದಾನ(MGOPA) ನಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದೆ. ಯಾವುದೇ ವಿಷಯ ಉಲ್ಲಂಘಿಸದಂತೆ ಪ್ರಸಾರ ಮಾಡಬೇಡಿ ಎಂದು ಹೇಳಲಾಗಿದೆ.

ಯಾವುದೇ ಉಲ್ಲಂಘನೆಯು GOPA/MGOPA ನಲ್ಲಿ ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಕೆಲವು ಎಫ್‌ಎಂ ಚಾನೆಲ್‌ಗಳು ಆಲ್ಕೋಹಾಲ್, ಡ್ರಗ್ಸ್, ಶಸ್ತ್ರಾಸ್ತ್ರಗಳು, ದರೋಡೆಕೋರರು ಮತ್ತು ಬಂದೂಕು ಸಂಸ್ಕೃತಿಯನ್ನು ವೈಭವೀಕರಿಸುವ ಹಾಡುಗಳನ್ನು ಅಥವಾ ವಿಷಯವನ್ನು ಪ್ರಸಾರ ಮಾಡುತ್ತಿವೆ ಎಂದು ಸಚಿವಾಲಯವು ಗಮನಿಸಿದೆ.

ಇಂತಹ ವಿಷಯವು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಬಂದೂಕು ಸಂಸ್ಕೃತಿ ಹುಟ್ಟುಹಾಕಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಹೇಳಿರುವುದರ ಬಗ್ಗೆ ಪ್ರಸ್ತಾಪಿಸಲಾಗಿದೆ. ಇಂತಹ ವಿಷಯಗಳು AIR ಪ್ರೋಗ್ರಾಂ ಕೋಡ್ ಉಲ್ಲಂಘಿಸುತ್ತದೆ ಎನ್ನಲಾಗಿದ್ದು, ಅಂತಹ ಪ್ರಸಾರ ನಿಷೇಧಿಸಲು ನಿರ್ಬಂಧ ವಿಧಿಸುವ ಹಕ್ಕು ಕೇಂದ್ರಕ್ಕೆ ಇದೆ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...