ನವದೆಹಲಿ : ಭಾರತ ಸರ್ಕಾರವು ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ.
ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಈ ವಾರ ಇತ್ತೀಚಿನ ಆವೃತ್ತಿಗಳನ್ನು ಚಾಲನೆ ಮಾಡುವ ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇವು ನಿಮ್ಮ ಫೋನ್ ನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಂಡವು ಎಚ್ಚರಿಕೆ ನೀಡಿದೆ. ಅಪರಿಚಿತ ಮೂಲಗಳಿಂದ ಸಿಗುವ ಆ್ಯಪ್ ಅಥವಾ ಅಪ್ಲಿಕೇಶನ್ ನನ್ನು ಡೌನ್ ಲೋಡ್ ಮಾಡದಂತೆ ಹಾಗೂ ಅಪರಿಚಿತ ಲಿಂಗ್ ಕ್ಲಿಕ್ ಮಾಡದಂತೆ ಎಚ್ಚರಿಕೆ ನೀಡಿದೆ.
ಆಂಡ್ರಾಯ್ಡ್ ಆವೃತ್ತಿಗಳಾದ 12, 12 ಎಲ್, 13 ಮತ್ತು ಇತ್ತೀಚಿನ 14 ರ ಮೇಲೂ ಪರಿಣಾಮ ಬೀರುತ್ತವೆ. ಫ್ರೇಮ್ವರ್ಕ್, ಸಿಸ್ಟಮ್, ಎಆರ್ಎಂ ಘಟಕಗಳು ಮತ್ತು ಮೀಡಿಯಾಟೆಕ್ ಘಟಕಗಳು, ಕ್ವಾಲ್ಕಾಮ್ ಘಟಕಗಳು ಮತ್ತು ಕ್ವಾಲ್ಕಾಮ್ ಕ್ಲೋಸ್-ಸೋರ್ಸ್ ಘಟಕಗಳಲ್ಲಿ ಅನೇಕ ದುರ್ಬಲತೆಗಳು ಅಸ್ತಿತ್ವದಲ್ಲಿವೆ ಎಂದು ಸಿಇಆರ್ಟಿ-ಇನ್ ಎತ್ತಿ ತೋರಿಸುತ್ತದೆ.
ಸ್ಯಾಮ್ ಸಂಗ್ , ರಿಯಲ್ ಮಿ , ಒನ್ ಪ್ಲಸ್ , ಶಿಯೋಮಿ ಮತ್ತು ವಿವೋದಂತಹ ಬ್ರಾಂಡ್ ಗಳು ಈ ಸಮಸ್ಯೆಯ ಬಗ್ಗೆ ಕಾಳಜಿ ವಹಿಸಬೇಕು . ಸಿಇಆರ್ಟಿ-ಇನ್ ಬುಲೆಟಿನ್ ಅಪರಿಚಿತ ಮೂಲಗಳಿಂದ ಬರುವ ಅಪ್ಲಿಕೇಶನ್ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಜನರಿಗೆ ಸಲಹೆ, ಸೂಚನೆ ನೀಡಿದೆ.