ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠವು ಕುಸಿಯುವ ಅಂಚಿನಲ್ಲಿದೆ. ಈಗಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಸುಮಾರು 600ಕ್ಕೂ ಹೆಚ್ಚು ಮನೆಗಳು ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನಿಜಕ್ಕೂ ಭಯಾನಕವಾಗಿವೆ.
ಕುಸಿಯುತ್ತಿರುವುದು ಯಾಕೆ ಅನ್ನೋ ನಿರ್ದಿಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ಇದಕ್ಕೆ ಕಾರಣ ಏನು ಅಂತ ಪತ್ತೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಜ್ಞರ ಸಮಿತಿ ರಚನೆ ಮಾಡಿವೆ. ಮೂರು ದಿನದಲ್ಲಿ ವರದಿ ನೀಡಲು ಸೂಚಿಸಲಾಗಿದೆ. ನಿನ್ನೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಮಿತಿ ರಚಿಸಲಾಗಿದೆ.
ಇನ್ನು ಅಪಾಯದಲ್ಲಿ ಅನೇಕ ಕುಟುಂಬಗಳು ಇರೋದ್ರಿಂದ ಸಂತ್ರಸ್ತರನ್ನು ಮೊದಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತಂಡಗಳು ಜೋಶಿಮಠದಲ್ಲಿ ಬೀಡುಬಿಟ್ಟಿವೆ. ಇನ್ನು ಜೋಶಿಮಠದದಲ್ಲಿ ಭೂಕುಸಿತ ಉಂಟಾಗುತ್ತಿರುವ ಕಾರಣ ಎನ್‌ಟಿಪಿಸಿ ಪವರ್ ಪ್ರಾಜೆಕ್ಟ್‌ನ ಸುರಂಗ ಕಾಮಗಾರಿಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.