ನವದೆಹಲಿ: ಸಂಗ್ರಹಣೆ, ಸಾಗಣೆ ಸಮಸ್ಯೆಗಳನ್ನು ಸುಧಾರಿಸಲು ಕೇಂದ್ರ ಸರ್ಕಾರವು ದೇಶದ ವಿವಿಧ ಪ್ರದೇಶಗಳಲ್ಲಿ ಮೇವು ಬ್ಯಾಂಕ್ ಪ್ರಾರಂಭಿಸಲಿದೆ.
ನವದೆಹಲಿಯಲ್ಲಿ ಇಂದು ಮೇವು ವಿಚಾರ ಸಂಕಿರಣ 2024 ರಲ್ಲಿ ಮಾತನಾಡಿದ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ ಅವರು, ಜಾನುವಾರು ಸಾಕಣೆದಾರರು ಎದುರಿಸುತ್ತಿರುವ ಸಂಗ್ರಹಣೆ, ಸಾರಿಗೆ ಮತ್ತು ಸಾಗಣೆ ಸಮಸ್ಯೆಗಳನ್ನು ಸುಧಾರಿಸಲು ಕೇಂದ್ರ ಸರ್ಕಾರವು ಭಾರತದ ವಿವಿಧ ಪ್ರದೇಶಗಳಲ್ಲಿ ಮೇವು ಬ್ಯಾಂಕ್ ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದರು.
ಹಾಲು ಉತ್ಪಾದನೆ ಮತ್ತು ಅದರ ಉತ್ಪಾದಕತೆಯನ್ನು ಸುಧಾರಿಸಲು ಜಾನುವಾರುಗಳ ಆಹಾರವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಮೇವು ಬ್ಯಾಂಕ್ ಅನ್ನು ಲಾಜಿಸ್ಟಿಕ್ ಮತ್ತು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಭಾರತವು ಅತಿದೊಡ್ಡ ಹಾಲು ಉತ್ಪಾದಕ ದೇಶವಾಗಿದ್ದರೂ, ಪ್ರತಿ ಜಾನುವಾರು ಹಾಲು ಉತ್ಪಾದಕತೆಯಲ್ಲಿ ಹಿಂದುಳಿದಿದೆ. ಆರೋಗ್ಯಕರ ಸ್ಪರ್ಧೆಯನ್ನು ಹುಟ್ಟುಹಾಕಲು ಹೈನುಗಾರಿಕೆ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಕೆಲಸಕ್ಕಾಗಿ ಸರ್ಕಾರವು ಪ್ರಶಸ್ತಿ ನೀಡಲು ಯೋಜಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.