alex Certify BIG NEWS: ಆಧಾರ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಶೈಕ್ಷಣಿಕ ಸಂಖ್ಯೆ: ಎಲ್ಲಾ ತರಗತಿ ಪ್ರವೇಶಕ್ಕೆ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಧಾರ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಶೈಕ್ಷಣಿಕ ಸಂಖ್ಯೆ: ಎಲ್ಲಾ ತರಗತಿ ಪ್ರವೇಶಕ್ಕೆ ಬಳಕೆ

ನವದೆಹಲಿ: ಆಧಾರ್ ಕಾರ್ಡ್ ರೀತಿಯಲ್ಲಿ ಪ್ರತಿ ವಿದ್ಯಾರ್ಥಿಗೂ ವಿಶಿಷ್ಟ ಗುರುತಿನ ಶೈಕ್ಷಣಿಕ ಸಂಖ್ಯೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಟಿ.ಜಿ. ಸೀತಾರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಪ್ರೀ ನರ್ಸರಿಯಿಂದಲೇ ಈ ಗುರುತಿನ ಸಂಖ್ಯೆ ಹೊಂದಲಿದ್ದು, ಪದವಿ, ಸ್ನಾತಕೋತ್ತರ ಪದವಿ ಅಧ್ಯಯನದವರೆಗೂ ಇದು ಮುಂದುವರೆಯಲಿದೆ.

ಈ ಸಂಖ್ಯೆಯು ವಿದ್ಯಾರ್ಥಿಯ ಶೈಕ್ಷಣಿಕ ಮಾಹಿತಿ ಖಾತೆಯಾಗಿರುರುತ್ತದೆ. ವಿದ್ಯಾರ್ಥಿಗಳ ಸಾಧನೆ, ಕಳಪೆ ನಿರ್ವಹಣೆ, ಶೈಕ್ಷಣಿಕ ಪ್ರಗತಿ ವಿವರ, ಪ್ರತಿ ತರಗತಿ ಪರೀಕ್ಷೆಯಲ್ಲಿ ಪಡೆದ ಅಂಕಗಳ ಸಹಿತ ಸಂಪೂರ್ಣ ಮಾಹಿತಿಯನ್ನು ಈ ಸಂಖ್ಯೆ ಹೊಂದಿರುತ್ತದೆ.

ಈ ಸಂಖ್ಯೆಯನ್ನು ವಿದ್ಯಾರ್ಥಿಯ ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲಾಗುವುದು. ಆಧಾರ್ ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರುತಿನ ಸಂಖ್ಯೆ ನೀಡಲು ಯೋಜನೆ ರೂಪಿಸಲಾಗಿದೆ. ವಿದ್ಯಾರ್ಥಿಯ ಸಂಪೂರ್ಣ ಶೈಕ್ಷಣಿಕ ಅವಧಿವರೆಗೆ ಈ ಸಂಖ್ಯೆ ಮಾನ್ಯವಾಗಿರುತ್ತದೆ. ಮೊದಲು ಇದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು. ಬಳಿಕ ವಿದ್ಯಾರ್ಥಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆ ಒಂದನ್ನು ನೀಡಲಾಗುತ್ತದೆ. ಉನ್ನತ ಶಿಕ್ಷಣ ಪೂರೈಸುವವರೆಗೆ ಇದು ಬಳಕೆಯಲ್ಲಿ ಇರುತ್ತದೆ. ಶೀಘ್ರವೇ ಈ ಯೋಜನೆ ಆರಂಭಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...