
ನವದೆಹಲಿ: ಇನ್ಫೋಸಿಸ್ ನ ಮೈಸೂರು ಕ್ಯಾಂಪಸ್ ನಿಂದ 300ಕ್ಕೂ ಅಧಿಕ ಹೊಸ ಸಿಬ್ಬಂದಿಯನ್ನು ಉದ್ಯೋಗದಿಂದ ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಕಾರ್ಮಿಕ ಸಚಿವಾಲಯದಿಂದ ಕರ್ನಾಟಕದ ಕಾರ್ಮಿಕ ಇಲಾಖೆಗೆ ಸೂಚನೆ ನೀಡಲಾಗಿದೆ.
ಆಂತರಿಕ ಪರೀಕ್ಷೆಯಲ್ಲಿ ಸತತ ಮೂರು ಬಾರಿ ಅನುತ್ತೀರ್ಣರಾದ ಕಾರಣ ನೀಡಿ 300ಕ್ಕೂ ಹೆಚ್ಚು ಹೊಸ ಸಿಬ್ಬಂದಿಯನ್ನು ಇತ್ತೀಚೆಗೆ ಉದ್ಯೋಗದಿಂದ ಇನ್ಫೋಸಿಸ್ ತೆಗೆದು ಹಾಕಿತ್ತು. ಆದರೆ, ಕೆಲಸದಿಂದ ತೆಗೆದು ಹಾಕಿದವರ ಸಂಖ್ಯೆ 300 ಅಲ್ಲ, 700ಕ್ಕಿಂತ ಹೆಚ್ಚಾಗಿದೆ ಎಂದು ಐಟಿ ಉದ್ಯೋಗಿಗಳ ಸಂಘಟನೆಗಳು ವಾದಿಸಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದು ಮನವಿ ಮಾಡಲಾಗಿತ್ತು.
ಇದರ ಬೆನ್ನಲ್ಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಕಾರ್ಮಿಕ ಸಚಿವಾಲಯಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ.