ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ನೀಡಲಾಗಿದೆ. ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಮೂರನೇ ಹಂತದ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದಿದೆ. ಬರೋಬ್ಬರಿ 15,611 ಕೋಟಿ ರೂಪಾಯಿ ಕಾಮಗಾರಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಕಾರಿಡಾರ್ -1 ಜೆಪಿ ನಗರದ ನಾಲ್ಕನೇ ಹಂತದಿಂದ ಕೆಂಪಾಪುರದವರೆಗೆ 21 ಸ್ಟೇಷನ್ ಗಳು, 32.15 ಕಿಲೋಮೀಟರ್ ವಿಸ್ತೀರ್ಣ ಇರುವ ಮಾರ್ಗಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಕಾರಿಡಾರ್ -2 ಹೊಸ ಹಳ್ಳಿಯಿಂದ ಕಡಬಗೆರೆಯವರೆಗೆ ಒಪ್ಪಿಗೆ ನೀಡಿದ್ದು, ಇದರಿಂದ ಮೆಟ್ರೋ ವಿಸ್ತೀರ್ಣ 220.20 ಕಿಲೋಮೀಟರ್ ಆಗಲಿದೆ ಎನ್ನಲಾಗಿದೆ.