ವಿಶ್ವದಾದ್ಯಂತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ಲಸಿಕೆ ಬಗ್ಗೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ.
ಈವರೆಗೆ ಕೊರೊನಾದ ಒಂದು ಲಸಿಕೆಯನ್ನು ಮಾತ್ರ ಒಬ್ಬ ವ್ಯಕ್ತಿಗೆ ನೀಡಲಾಗ್ತಿತ್ತು. ಇನ್ಮುಂದೆ ಕೊರೊನಾದ ಎರಡು ಬೇರೆ ಬೇರೆ ಲಸಿಕೆ ಸಿಗುವ ಸಾಧ್ಯತೆಯಿದೆ. ಈ ಬಗ್ಗೆ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಸರ್ಕಾರ ಅನುಮತಿ ನೀಡಿದೆ. ಇದುವರೆಗೆ ಬಂದ ಇತರ ವೈದ್ಯಕೀಯ ಅಧ್ಯಯನಗಳು, ಲಸಿಕೆಗಳ ಮಿಶ್ರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸಕಾರಾತ್ಮಕ ಫಲಿತಾಂಶಗಳನ್ನು ಕಂಡುಕೊಂಡಿವೆ.
ಎಸ್‌ಇಸಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಮಿಶ್ರ ಡೋಸ್ ಅಧ್ಯಯನಕ್ಕೆ ಅನುಮತಿ ಸಿಕ್ಕಿದೆ. ಶೀಘ್ರದಲ್ಲೇ ಎರಡು ಲಸಿಕೆಗಳ ಮಿಶ್ರಣಕ್ಕೆ ಸಂಬಂಧಿಸಿದ ಅಧ್ಯಯನವನ್ನು ದೇಶದ ವಿವಿಧ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಅನೇಕ ದೇಶಗಳಲ್ಲಿ, ಎರಡು ಕೊರೊನಾ ಲಸಿಕೆಗಳನ್ನು ಒಂದೇ ವ್ಯಕ್ತಿಗೆ ನೀಡಲಾಗಿದ್ದು, ಫಲಿತಾಂಶಗಳು ಉತ್ತಮವಾಗಿರುವುದನ್ನು ಕಾಣಬಹುದು.
ಅಧ್ಯಯನದ ಫಲಿತಾಂಶ ಉತ್ತಮವಾಗಿದ್ದರೆ ಲಸಿಕೆ ಮಿಶ್ರಣ ನಡೆಯಲಿದೆ. ಅಂದಾಜಿನ ಪ್ರಕಾರ, ಈ ಅಧ್ಯಯನ ಪೂರ್ಣಗೊಳ್ಳಲು ಮೂರರಿಂದ ನಾಲ್ಕು ತಿಂಗಳು ಬೇಕಾಗುತ್ತದೆ.
ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಮಿಶ್ರಣದಿಂದ ಇದುವರೆಗೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡುಬಂದಿಲ್ಲ. ಉತ್ತರ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಗೆ ತಪ್ಪಾಗಿ ಎರಡು ವಿಭಿನ್ನ ಲಸಿಕೆ ನೀಡಲಾಗಿತ್ತು. ಇದರ ನಂತರ ವೈದ್ಯರು ಆ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದರು. ವ್ಯಕ್ತಿಯು ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಮತ್ತು ಅವನಿಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ.