
ನವದೆಹಲಿ: ಅನಾರೋಗ್ಯ ಪೀಡಿತರ ಜೀವಿತ ಪ್ರಮಾಣ ಪತ್ರ ಮನೆಯಿಂದಲೇ ಸಂಗ್ರಹಿಸಲು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ನೀಡುವ ಪಿಂಚಣಿಗೆ ಅರ್ಹರಾದ ವ್ಯಕ್ತಿಗಳು ತಮ್ಮ ಜೀವಿತ ಪ್ರಮಾಣ ಪತ್ರವನ್ನು ಸಲ್ಲಿಸಲು ಅಗತ್ಯವಿದ್ದಲ್ಲಿ ಬ್ಯಾಂಕ್ ಸಿಬ್ಬಂದಿಯನ್ನೇ ಮನೆಗೆ ಕರೆಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಈ ಕುರಿತು ಆದೇಶ ಹೊರಡಿಸಲಾಗಿದೆ.
ಒಂದು ವೇಳೆ ಹಿರಿಯ ನಾಗರಿಕರು, ಅನಾರೋಗ್ಯದಿಂದ ಬಳಲುತ್ತಿದ್ದು, ಓಡಾಡಲು ಸಾಧ್ಯವಾಗದಿದ್ದಲ್ಲಿ ಅಂತಹವರಿಂದ ಜೀವಿತ ಪ್ರಮಾಣ ಪತ್ರವನ್ನು ಪಡೆಯಲು ಬ್ಯಾಂಕುಗಳು ತಮ್ಮ ಅಧಿಕಾರಿಗಳನ್ನು ಮನೆಗೆ ಕಳುಹಿಸಿಕೊಡಬಹುದು. ಇಲ್ಲವಾದಲ್ಲಿ ಡಿಜಿಟಲ್ ಮೂಲಕ ಪಿಂಚಣಿದಾರರು ತಮ್ಮ ಮುಖ ಚಹರೆ ಬಳಸಿ ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು ಎಂದು ಹೇಳಲಾಗಿದೆ.