ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 17ರಂದು ಹೈದರಾಬಾದ್ ವಿಮೋಚನಾ ದಿನ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರವೂ 13 ತಿಂಗಳವರೆಗೆ ಹೈದರಾಬಾದ್ ಪ್ರಾಂತ್ಯ ಸ್ವಾತಂತ್ರ್ಯ ಪಡೆದುಕೊಂಡಿರಲಿಲ್ಲ. ಈ ಪ್ರಾಂತ್ಯ ನಿಜಾಮರ ಆಳ್ವಿಕೆಯಲ್ಲಿ ಇತ್ತು. ಕರ್ನಾಟಕದ, ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ ಮತ್ತು ಈಗಿನ ಯಾದಗಿರಿ, ಕೊಪ್ಪಳ ಜಿಲ್ಲೆಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದು, ಇವುಗಳಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಗಳು ಎನ್ನಲಾಗುತ್ತಿತ್ತು.
1948ರ ಸೆಪ್ಟೆಂಬರ್ 17ರಂದು ಆಪರೇಷನ್ ಪೋಲೋ ಎಂಬ ಪೊಲೀಸ್ ಕ್ರಮದ ನಂತರ ನಿಜಾಮರ ಆಳ್ವಿಕೆಯಿಂದ ಈ ಪ್ರದೇಶವನ್ನು ಮುಕ್ತಗೊಳಿಸಲಾಗಿತ್ತು. ಪ್ರತಿ ವರ್ಷ ಸೆ. 17ರಂದು ಹೈದರಾಬಾದ್ ವಿಮೋಚನಾ ದಿನ ಆಚರಿಸಲಾಗುವುದು ಎಂದು ಹೇಳಲಾಗಿದೆ.