ನವದೆಹಲಿ: ವಿಶೇಷ ಸ್ವಚ್ಛತಾ ಅಭಿಯಾನ 3.0 ಅಡಿಯಲ್ಲಿ ಕೇಂದ್ರವು ಇಲ್ಲಿಯವರೆಗೆ ಸ್ಕ್ರ್ಯಾಪ್ ವಿಲೇವಾರಿಯಿಂದ 176 ಕೋಟಿ ರೂಪಾಯಿಗಳನ್ನು ಗಳಿಸಿದೆ.
2021 ಮತ್ತು 2022 ರಲ್ಲಿ ನಡೆದ ವಿಶೇಷ ಅಭಿಯಾನಗಳ ಮಾದರಿಯಲ್ಲಿ ಸ್ವಚ್ಛತಾ ಸುಧಾರಣೆ ಮತ್ತು ಬಾಕಿ ಉಳಿದಿರುವ ವಸ್ತುಗಳನ್ನು ವಿಲೇವಾರಿ ಮಾಡಲು ಈ ಅಭಿಯಾನವನ್ನು ಆಯೋಜಿಸಲಾಗಿದೆ.
ಪ್ರಗತಿಯ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಕಳೆದ ಮೂರು ವರ್ಷಗಳಲ್ಲಿ 776 ಕೋಟಿ ರೂಪಾಯಿ ಸಂಚಿತ ಆದಾಯವನ್ನು ಗಳಿಸಲಾಗಿದೆ ಎಂದು ಹೇಳಿದರು.
ಆಡಳಿತ ಸುಧಾರಣಾ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಕಾರ್ಯದರ್ಶಿ ವಿ.ಶ್ರೀನಿವಾಸ್ ಮಾತನಾಡಿ, ಈ ಅಭಿಯಾನದಿಂದ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುವುದಲ್ಲದೆ, ಹಲವಾರು ಕಚೇರಿ ಸ್ಥಳಗಳನ್ನು ಸ್ವಚ್ಛಗೊಳಿಸಲು ಮತ್ತು ಕಚೇರಿ ಸ್ಥಳವನ್ನು ಮುಕ್ತಗೊಳಿಸಲು ಕಾರಣವಾಗಿದೆ ಎಂದರು.