
ಕೋವಿಡ್-19 ಕಾರಣದಿಂದಾಗಿ 2021ರ ಜನಗಣತಿಯನ್ನು ಮುಂದಿನ ಆದೇಶದವರೆಗೂ ಮುಂದೂಡಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಲೋಕಸಭೆಗೆ ತಿಳಿಸಿದೆ.
2020 ಮತ್ತು 2021ರಲ್ಲಿ ಸೆನ್ಸಸ್ ಅಧಿಕಾರಿಗಳ ಒಟ್ಟಾರೆ 372 ಪೋಸ್ಟ್‌ಗಳಿಗೆ ನೇಮಕಾತಿ ಮಾಡಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಲಿಖಿತ ಉತ್ತರ ನೀಡಿದ್ದಾರೆ.
ಹಳಿ ದಾಟಲು ಹೆಣಗಾಡುತ್ತಿರುವ ಗಜಪಡೆಯ ಮನ ಕಲಕುವ ವಿಡಿಯೋ ವೈರಲ್: ಕೂಡಲೇ ತ್ವರಿತ ಕ್ರಮ ಕೈಗೊಂಡ ರೈಲ್ವೆ ಸಚಿವಾಲಯ
“ಸೆನ್ಸಸ್ ಅಧಿಕಾರಿಗಳ 1,736 ಹುದ್ದೆಗಳಿಗೆ ಭರ್ತಿ ಮಾಡಲು ಸಿಬ್ಬಂದಿ ನೇಮಕಾತಿ ಆಯೋಗ ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ ಮನವಿಗಳನ್ನು ಕಳುಹಿಸಲಾಗಿದೆ,” ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆ 4,844 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.