ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಹಾಗೆಯೇ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಘಟನೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ನಟಿ ಸೆಲಿನಾ ಜೇಟ್ಲಿ ತಮ್ಮ ಜೀವನದಲ್ಲಿ ನಡೆದ ಆಘಾತಕಾರಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ಬಾಲ್ಯದಲ್ಲಿ ಅವರು ಕೆಟ್ಟ ಅನುಭವಕ್ಕೆ ಒಳಗಾಗಿರೋದಾಗಿ ತಿಳಿಸಿದ್ದಾರೆ.
ತಮ್ಮ ಆರನೇ ತರಗತಿ ಫೋಟೋ ಒಂದನ್ನು ಪೋಸ್ಟ್ ಮಾಡಿದ ಅವರು, ಯಾವಾಗ್ಲೂ ಬಲಿಪಶುವನ್ನೇ ತಪ್ಪು ಎಂದು ಹೇಳಲಾಗುತ್ತದೆ. ಈ ಫೋಟೋ ನಾನು ಆರನೇ ತರಗತಿಯಲ್ಲಿದ್ದಾಗ. ಹತ್ತಿರದ ಕಾಲೇಜಿನ ಹುಡುಗ ನಾನು ಶಾಲೆಯಿಂದ ಹೊರಬರುವುದನ್ನು ಕಾಯಲು ಪ್ರಾರಂಭಿಸಿದ್ದ. ಅವನು ಪ್ರತಿದಿನ ನನ್ನ ಶಾಲೆಯ ರಿಕ್ಷಾವನ್ನು ಹಿಂಬಾಲಿಸಿ ಮನೆಯವರೆಗೆ ಬರುತ್ತಿದ್ದ. ಕೆಲವು ದಿನಗಳ ನಂತರ, ನನ್ನ ಗಮನವನ್ನು ಸೆಳೆಯಲು, ಅವನು ರಸ್ತೆಯ ಮಧ್ಯದಲ್ಲಿ ನನ್ನ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದ. ಅಲ್ಲಿದ್ದವರು ಯಾರೂ ಆತನ ವಿರುದ್ಧ ಕ್ರಮಕೈಗೊಳ್ಳಲಿಲ್ಲ.
ಇದ್ರ ಮಧ್ಯೆ ನನ್ನ ಶಿಕ್ಷಕರು ನನ್ನ ಮೇಲೆಯೇ ಆರೋಪ ಮಾಡಿದ್ರು. ನಾನು ಸಡಿಲವಾದ ಬಟ್ಟೆ ಧರಿಸೋದಿಲ್ಲ, ಕೂದಲಿಗೆ ಎಣ್ಣೆ ಹಚ್ಚಿ, ಕೂದಲು ಕಟ್ಟೋದಿಲ್ಲ. ಹಾಗಾಗಿ ಹುಡುಗ ನನ್ನ ಹಿಂದೆ ಬಿದ್ದಿದ್ದ ಎಂದು ಶಿಕ್ಷಕರು ಸೆಲಿನಾಗೆ ಹೇಳಿದ್ದರು. ಶಿಕ್ಷಕರ ಈ ಮಾತಿನ ನಂತ್ರ ನಾನು ತುಂಬಾ ದಿನ ನನ್ನನ್ನು ನಾನು ದೂಷಿಸುತ್ತಿದ್ದೆ. ಒಂದು ದಿನ ಬೆಳಿಗ್ಗೆ ಶಾಲೆಗೆ ಹೋಗಲು ರಿಕ್ಷಾಕ್ಕೆ ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ಖಾಸಗಿ ಅಂಗ ತೋರಿಸಿದ್ದ. ಶಿಕ್ಷಕರ ಮಾತನ್ನು ನೆನೆದು ಆಗ್ಲೂ ನಾನು ನನ್ನನ್ನು ದೂಷಿಸಿಕೊಂಡಿದ್ದೆ ಎಂದು ಸೆಲಿನಾ ಹೇಳಿದ್ದಾರೆ.
ಅಷ್ಟೇ ಅಲ್ಲ 11ನೇ ತರಗತಿಯಲ್ಲಿ ಸ್ಕೂಟಿ ಬ್ರೇಕ್ ಕಟ್ ಮಾಡಿದ್ದ ಹುಡುಗರು, ಅಶ್ಲೀಲವಾಗಿ ನಿಂದಿಸಿದ್ದರು. ನೀನು ಜೀನ್ಸ್ ಧರಿಸಿ, ಮಾಡರ್ನ್ ಆಗಿ ಕಾಣುವ ಕಾರಣ ಯುವಕರು ನಿನ್ನನ್ನು ತಪ್ಪು ತಿಳಿದಿದ್ದಾರೆಂದು ಶಿಕ್ಷಕಿ ಆಗ್ಲೂ ಹೇಳಿದ್ದರಂತೆ. ಇದ್ರಿಂದ ನಾನು ತುಂಬಾ ನೋವು ತಿಂದಿದ್ದೆ ಎಂದು ಸೆಲಿನಾ ಸುದೀರ್ಘ ಪೋಸ್ಟ್ ಹಾಕಿದ್ದಾರೆ.