alex Certify ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲೆಬ್ರಿಟಿಗಳನ್ನು ಫಾಲೋ ಮಾಡುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ….!

ಕಿಮ್​ ಕರ್ದಾಶಿಯನ್​, ಜಸ್ಟಿನ್​ ಬೀಬರ್​ ಹಾಗೂ ಚಾರ್ಲಿ ಡಿ ಅಮೆಲಿಯೋ ಸೇರಿದಂತೆ ವಿವಿಧ ಸೆಲೆಬ್ರಿಟಿಗಳ ಇನ್​ಸ್ಟಾಗ್ರಾಂ ಫಾಲೋವರ್​ಗಳು ತಮ್ಮ ಬಗ್ಗೆ ಋಣಾತ್ಮಕ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ ಎಂಬ ಆಘಾತಕಾರಿ ವಿಚಾರವು ಫೇಸ್​​ಬುಕ್​ನ ಆಂತರಿಕ ಸಂಶೋಧನೆಯಲ್ಲಿ ಕಂಡುಬಂದಿದೆ.

ಈ ಅಧ್ಯಯನದ ವರದಿಯನ್ನು ವಾಲ್​ ಸ್ಟ್ರೀಟ್​ ಜರ್ನಲ್​ನಲ್ಲಿ ಬಹಿರಂಗಪಡಿಸಲಾಗಿದೆ.
ಆನ್​ಲೈನ್​ ಸೆಲೆಬ್ರಿಟಿಗಳು ತಮ್ಮನ್ನು ತಾವು ತೋರಿಸಿಕೊಳ್ಳುವ ರೀತಿಯು ಹದಿಹರೆಯದವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಎನ್ನುವುದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಟಿ-20 ವಿಶ್ವಕಪ್: ಟೀಂ ಇಂಡಿಯಾದಲ್ಲಾಗಲಿದ್ಯಾ ಬದಲಾವಣೆ….?

ಇನ್​ಸ್ಟಾಗ್ರಾಂನಲ್ಲಿ ಸೋಶಿಯಲ್​​ ಕಂಪ್ಯಾರಿಸನ್​​ ಎಂಬ ಹೆಸರಿನ ಅಧ್ಯಯನದಲ್ಲಿ ಕಳೆದ ವರ್ಷ ಮಾರ್ಚ್ ಹಾಗೂ ಏಪ್ರಿಲ್​ ತಿಂಗಳಲ್ಲಿ ಸುಮಾರು 1 ಲಕ್ಷ ಮಂದಿಯ ಮೇಲೆ ಸಮೀಕ್ಷೆ ನಡೆಸಲಾಯ್ತು. ಅಮೆರಿಕ, ಆಸ್ಟ್ರೇಲಿಯಾ ಹಾಗೂ ಬ್ರೆಜಿಲ್​ ಸೇರಿದಂತೆ ಒಟ್ಟು 9 ದೇಶಗಳಲ್ಲಿ ಈ ಅಧ್ಯಯನವನ್ನು ಕೈಗೊಳ್ಳಲಾಗಿತ್ತು.

ಈ ಸಮೀಕ್ಷೆಯ ವಿಚಾರವಾಗಿ ಮಾತನಾಡಿದ ಫೇಸ್​ಬುಕ್​ ವಕ್ತಾರ ಕೆವಿನ್​ ಮ್ಯಾಕ್​​ಅಲಿಸ್ಟರ್​, ಇನ್​ಸ್ಟಾಗ್ರಾಂನಲ್ಲಿ ಈ ಸೆಲೆಬ್ರಿಟಿ ಖಾತೆಗಳನ್ನು ಫಾಲೋ ಮಾಡುವವರು ಸಾಮಾಜಿಕ ಹೋಲಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಮೇಲೆ ಋಣಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಕೆಲವೊಂದು ಸೆಲೆಬ್ರಿಟಿಗಳ ಹೆಸರು ಕಾಮನ್​ ಆಗಿ ಕೇಳಿ ಬಂದಿದೆ ಎಂದು ಹೇಳಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಶತಕ ಸಿಡಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಮೃತಿ ಮಂದಾನ

ಸಮೀಕ್ಷೆಯ ಪ್ರಕಾರ ಪಟ್ಟಿ ಮಾಡಲಾದ ಸೆಲೆಬ್ರಿಟಿಗಳು 30 ದಶಲಕ್ಷಕ್ಕೂ ಅಧಿಕ ಫಾಲೋವರ್ಸ್​ ಹೊಂದಿದವರಾಗಿದ್ದಾರೆ. ಇದರಲ್ಲಿ ಗಾಯಕಿ ಅರಿಯಾನಾ ಗ್ರಾಂಡೆ ಹಾಗೂ ಮಾಡೆಲ್​​ ಕೆಂಡಾಲ್​ ಜೆನ್ನರ್​​ ಫಾಲೋವರ್ಸ್ ಹೆಚ್ಚಿನ ಸಾಮಾಜಿಕ ತುಲನೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...