ಇತ್ತೀಚಿನ ದಿನಗಳಲ್ಲಿ ಐಸ್ ಬಾತ್ ಟ್ರೆಂಡ್ ಜೋರಾಗಿದೆ. ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಕೂಡ ಐಸ್ ನೀರಿನಲ್ಲಿ ಸ್ನಾನ ಮಾಡಿ ಗಮನಸೆಳೆದಿದ್ದಾರೆ. ಫಿಟ್ನೆಸ್ ಪ್ರೀಕ್ಸ್ ನಡುವೆ ಇದೊಂದು ಪೈಪೋಟಿಯ ಸಂಗತಿಯೂ ಹೌದು. ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಸಮಂತಾ ರುತ್ ಪ್ರಭು, ರಾಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಐಸ್ ಬಾತ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅಭಿಮಾನಿಗಳಿಗೆ ಸಹ ಇದು ತುಂಬಾ ಇಷ್ಟವಾಗಿದೆ. ಆದರೆ ಐಸ್ ಬಾತ್ ಸುರಕ್ಷಿತವೇ? ಇದರಿಂದ ಆಗುವ ಪ್ರಯೋಜನಗಳು ಹಾಗೂ ಹಾನಿ ಎಲ್ಲವನ್ನೂ ತಿಳಿದುಕೊಳ್ಳೋಣ.
ಸ್ನಾಯು ನೋವಿಗೆ ಪರಿಹಾರ – ಐಸ್ ನೀರಿನಲ್ಲಿ ಸ್ನಾನ ಮಾಡುವುದರಿಂದ ಸ್ನಾಯು ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ದೈಹಿಕವಾಗಿ ಕಠಿಣ ವ್ಯಾಯಾಮ ಮಾಡಿದ ಸಂದರ್ಭದಲ್ಲಿ ಉಂಟಾಗುವ ಸ್ನಾಯುಗಳಲ್ಲಿನ ಊತವನ್ನು ಕಡಿಮೆ ಮಾಡಲು ಐಸ್ ಬಾತ್ ತುಂಬಾ ಪ್ರಯೋಜನಕಾರಿ. ಏಕೆಂದರೆ ಐಸ್ ರಕ್ತನಾಳಗಳನ್ನು ಕುಗ್ಗಿಸುತ್ತದೆ, ಊತವನ್ನು ಕಡಿಮೆ ಮಾಡುತ್ತದೆ.
ಆಯಾಸಕ್ಕೆ ಪರಿಹಾರ – ಐಸ್ ಬಾತ್ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಣ್ಣೀರು ನರಮಂಡಲವನ್ನು ಸಕ್ರಿಯಗೊಳಿಸುತ್ತದೆ. ಇದರಿಂದಾಗಿ ಹೆಚ್ಚು ಅಲರ್ಟ್ ಆಗಿ ಇರಬಹುದು.
ಉರಿಯೂತಕ್ಕೆ ಪರಿಹಾರ – ಊತವನ್ನು ಕಡಿಮೆ ಮಾಡಲು ಐಸ್ ಬಾತ್ ಸಹಾಯಕವಾಗಿದೆ. ನಂತರ ಊತ ಮತ್ತು ಸಂಧಿವಾತದಂತಹ ಸಮಸ್ಯೆ ಇದ್ದವರು ಐಸ್ ವಾಟರ್‌ನಲ್ಲಿ ಸ್ನಾನ ಮಾಡಬಹುದು.
ಸ್ನಾಯು ಚೇತರಿಕೆ – ಐಸ್ ಸ್ನಾನವು ಸ್ನಾಯುವಿನ ಚೇತರಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ವ್ಯಾಯಾಮದ ನಂತರ ಸ್ನಾಯುಗಳಲ್ಲಿ ಮೈಕ್ರೋ ಟಿಯರ್ಸ್ ಸಂಭವಿಸುತ್ತದೆ. ಐಸ್ ಸ್ನಾನವು ಈ ಮೈಕ್ರೋ ಟಿಯರ್ಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಆದರೆ ಐಸ್ ಬಾತ್ ಮಾಡುವ ಮುನ್ನ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಮೊದಲ ಬಾರಿಗೆ ಐಸ್ ಬಾತ್ ತೆಗೆದುಕೊಳ್ಳುತ್ತಿದ್ದರೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಐಸ್ ಬಾತ್ ಕೂಡ ಹಾನಿಯನ್ನುಂಟುಮಾಡುತ್ತದೆ.