ಬೆಂಗಳೂರು : ರಾಜ್ಯಾದ್ಯಂತ ‘ವರಮಹಾಲಕ್ಷ್ಮಿ’ ಹಬ್ಬದ ಸಂಭ್ರಮ ಮನೆ ಮಾಡಿದೆ. ರಾಜ್ಯದ ಹಲವು ದೇವಾಲಯಗಳಲ್ಲಿ ಇಂದು ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.
ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಬನಶಂಕರಿ ದೇವಿಗೆ ನೋಟಿನ ಅಲಂಕಾರ ಮಾಡಲಾಗಿದ್ದು, ತಾಯಿಗೆ ಹೂವು, ಹಣ್ಣುಗಳನ್ನು ಅರ್ಪಣೆ ಮಾಡಿ ಭಕ್ತರು ಇಂದು ಮುಂಜಾನೆಯಿಂದಲೇ ದರ್ಶನ ಪಡೆಯುತ್ತಿದ್ದಾರೆ.
ವರಮಹಾಲಕ್ಷ್ಮಿ’ ಹಬ್ಬದ ಹಿನ್ನೆಲೆ ಹೂವು ಹಾಗೂ ಹಣ್ಣುಗಳ ದರ ಕೂಡ ಗಗನಕ್ಕೇರಿದೆ. ಬೆಂಗಳೂರಿನ ಕೆಆರ್ ಮಾರ್ಕೆಟ್ ನಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೂವು ಹಣ್ಣು ಖರೀದಿಯಲ್ಲಿ ತೊಡಗಿದ್ದರು.ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸಿದ್ದಾರೆ . ಮುಂಜಾನೆಯೇ ಎದ್ದು ಲಕ್ಷ್ಮೀಗೆ ವಿಶೇಷ ಸಿಹಿತಿಂಡಿ ಮಾಡಿ, ದೇವಿಯನ್ನು ಅಲಂಕರಿಸಿ ದೇವಿಯ ಆಶೀರ್ವಾದ ಪಡೆದಿದ್ದಾರೆ.ಅಕ್ಕ ಪಕ್ಕದ ಮನೆಯ ಮಹಿಳೆಯರನ್ನು ಕರೆದು ಅವರಿಗೆ ಬಾಗಿನ ನೀಡಿ ಸಂಭ್ರಮಿಸುತ್ತಿದ್ದಾರೆ.