ಬೆಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಚರ್ಚ್ ಗಳಲ್ಲಿ ಒಮ್ಮೆಗೆ 10 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಆಯೋಜಕರು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಲಾಗಿದೆ.
ಹಬ್ಬ ಆಚರಣೆ ವೇಳೆಯಲ್ಲಿ ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಹೆಚ್ಚು ಜನ ಸೇರುವಂತಿಲ್ಲ. ರೆಸ್ಟೋರೆಂಟ್, ಪಬ್ ಮತ್ತು ಕ್ಲಬ್ ಗಳಲ್ಲಿ ಹೆಚ್ಚು ಜನ ಸೇರಬಾರದು. ವಿಶೇಷ ಯೋಜಿತ ಒಟ್ಟುಗೂಡುವಿಕೆಗೆ ಅವಕಾಶ ಇರುವುದಿಲ್ಲ. ವಿಶೇಷವಾದ ಡಿಜೆ, ಡ್ಯಾನ್ಸ್ ಮತ್ತು ಪಾರ್ಟಿಗಳನ್ನು ನಡೆಸುವಂತಿಲ್ಲ. ಪಬ್, ರೆಸ್ಟೋರೆಂಟ್ ತೆರೆಯಲು ನಿರ್ಬಂಧವಿಲ್ಲ ಎನ್ನಲಾಗಿದೆ.
ಕ್ರಿಸ್ಮಸ್ ವಸ್ತು ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಸಾಮಾಜಿಕ ಅಂತರ ಕಡ್ಡಾಯವಾಗಿರುತ್ತದೆ. ಸಾರ್ವಜನಿಕ ಹಸ್ತಲಾಘವ, ಆಲಿಂಗನ ನಿಷೇಧವಿದೆ. ಬಾರ್, ಪಬ್, ರೆಸ್ಟೋರೆಂಟ್ ತೆರೆದಿರುತ್ತದೆ. ಆದರೆ, ಹೆಚ್ಚು ಜನ ಸೇರುವಂತಿಲ್ಲ. ಡ್ಯಾನ್ಸ್ ಇರಲ್ಲ. ಯಾವುದೇ ಪಾರ್ಟಿ ಆಯೋಜನೆ ಮಾಡಂಗಿಲ್ಲ. ಸಾರ್ವಜನಿಕವಾಗಿ ಸೆಲೆಬ್ರೇಷನ್ ಗೆ ಬ್ರೇಕ್ ಹಾಕಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇರಬೇಕು ಎನ್ನಲಾಗಿದೆ.