
ಬೆಂಗಳೂರು: ಮದುವೆಗೆಂದು ತಂದಿದ್ದ ಚಿನ್ನಾಭರಣ, ಹಣವನ್ನು ಕಳ್ಳರು ಎಗರಿಸಿದ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಶಿವಣ್ಣ ಎಂಬುವರ ಮನೆಯಲ್ಲಿದ್ದ ನಗದು ಚಿನ್ನಾಭರಣ ಕಳವು ಮಾಡಲಾಗಿದೆ.
5 ಲಕ್ಷ ರೂಪಾಯಿ ನಗದು, 6 ಲಕ್ಷ ರೂಪಾಯಿ ಮೌಲ್ಯದ 85 ಗ್ರಾಂ ಚಿನ್ನಾಭರಣ ದೋಚಲಾಗಿದೆ. ನೆಲಮಂಗಲ ತಾಲೂಕಿನ ಟೀಚರ್ಸ್ ಲೇಔಟ್ ನಲ್ಲಿ ಘಟನೆ ನಡೆದಿದೆ.
ನಿಶ್ಚಿತಾರ್ಥಕ್ಕಾಗಿ ಕಲ್ಯಾಣ ಮಂಟಪಕ್ಕೆ ಕುಟುಂಬದವರು ತೆರಳಿದ್ದರು. ಬೆಳಗ್ಗೆ ಮನೆಗೆ ಬಂದು ನೋಡಿದಾಗ ನಗ, ನಾಣ್ಯ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಲ್ಯಾಣ ಮಂದಿರಕ್ಕೆ ಕೊಡಲು ಹಣ ತೆಗೆದುಕೊಂಡು ಹೋಗಲು ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.