alex Certify ʼಸೆರೆಲ್ಯಾಕ್ʼ ಗೆ ಭಾರತದಲ್ಲಿ 50 ವರ್ಷಗಳ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೆರೆಲ್ಯಾಕ್ʼ ಗೆ ಭಾರತದಲ್ಲಿ 50 ವರ್ಷಗಳ ಸಂಭ್ರಮ

ಧಾನ್ಯ-ಆಧಾರಿತ ಪೂರಕ ಆಹಾರವಾಗಿರುವ ನೆಸ್ಲೆ ಅವರ ಸೆರೆಲ್ಯಾಕ್, ಭಾರತದಲ್ಲಿ ತನ್ನ 50 ನೇ ವರ್ಷಕ್ಕೆ ಕಾಲಿಟ್ಟಿದೆ. 15 ನೇ ಸೆಪ್ಟೆಂಬರ್ 1975 ರಂದು ಸೆರೆಲ್ಯಾಕ್ ನ ಮೊದಲ ಬ್ಯಾಚನ್ನು ಪಂಜಾಬ್‌ನ ಮೋಗಾದಲ್ಲಿರುವ ನೆಸ್ಲೆ ಇಂಡಿಯಾದ ಪ್ರಮುಖ ಕಾರ್ಖಾನೆಯಲ್ಲಿ ತಯಾರಿಸಲಾಗಿತ್ತು. ಇಂದೂ ಸಹ, ಪಂಜಾಬ್‌ನ ಮೋಗಾ ಕಾರ್ಖಾನೆ ಮತ್ತು ಹರಿಯಾಣದ ಸಮಲ್ಖಾ ಕಾರ್ಖಾನೆಗಳಲ್ಲಿ ನೂರಾರು ಉದ್ಯೋಗಿಗಳು ಅದೇ ಕಾಳಜಿ ಮತ್ತು ಉತ್ಸಾಹಗಳಿಂದ ಗುಣಮಟ್ಟದ ಪೌಷ್ಟಿಕಾಂಶದ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ.

ಕಳೆದ ಐದು ದಶಕಗಳಿಂದಲೂ ಸೆರೆಲ್ಯಾಕ್, ಸ್ಥಳೀಯ ಮೂಲದ ಧಾನ್ಯಗಳು ಮತ್ತು ಹಾಲು ಸೇರಿದಂತೆ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಬಳಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡಿದೆ. ಸೆರೆಲ್ಯಾಕ್ ನ ಪ್ರತಿ ಬ್ಯಾಚ್, ಪ್ರತಿ ಪ್ಯಾಕ್, ಬಳಕೆಗೆ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉತ್ಪನ್ನಗಳನ್ನು ಕಠಿಣ ಗುಣಮಟ್ಟದ ತಪಾಸಣೆಗೆ (40 ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆಗಳು) ಒಳಪಡಿಸಲಾಗುತ್ತದೆ.

ಜೀವಸತ್ವಗಳು ಮತ್ತು ಖನಿಜಗಳು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ಸೂಕ್ಷ್ಮ ಪೋಷಕಾಂಶಗಳ ಸರಿಯಾದ ಸೇವನೆಯಿಂದ ಆರೋಗ್ಯ ಉತ್ತಮವಾಗಿರುತ್ತದೆ. ಭಾರತಕ್ಕೆ ಪರಿಚಯವಾದಾಗಿನಿಂದಲೂ ಸೆರೆಲ್ಯಾಕ್, 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಪೂರಕ ಆಹಾರವನ್ನು ನೀಡುತ್ತಿದೆ. ಸೆರೆಲ್ಯಾಕ್ ಹಲವು ಪೋಷಕಾಂಶಗಳನ್ನು ಹೊಂದಿದೆ

ನೆಸ್ಲೆ ಸೆರೆಲ್ಯಾಕ್ ಅನ್ನು ನೆಸ್ಲೆಯ ಜಾಗತಿಕ R&D ನೆಟ್‌ವರ್ಕ್‌ ಹಾಗೂ ಸ್ಥಳೀಯ ಪರಿಣತಿ ಮತ್ತು ಅಂತರಾಷ್ಟ್ರೀಯ ಆವಿಷ್ಕಾರಗಳ ಸಹಯೋಗದೊಂದಿಗೆ ಪೌಷ್ಟಿಕವಾಗಿ ಅಭಿವೃದ್ಧಿಪಡಿಸಲಾಗಿದೆ.

ಕಳೆದ 5 ವರ್ಷಗಳಲ್ಲಿ, ಅದರ ನಾವೀನ್ಯತೆಯ ಪ್ರಯಾಣದ ಭಾಗವಾಗಿ, ಸೆರೆಲ್ಯಾಕ್ ನಲ್ಲಿ ಸೇರಿಸಿರುವ ಸಕ್ಕರೆಯ ಮಟ್ಟವನ್ನು 30% ವರೆಗೆ ಕಡಿತಗೊಳಿಸಲಾಗಿದೆ. ನೆಸ್ಲೆ ಯಾವುದೇ ಸಂಸ್ಕರಿಸದ ಸಕ್ಕರೆಯನ್ನು ಬೆರೆಸದಿರುವ ‘ಸೆರೆಲ್ಯಾಕ್’ನ ಹೊಸ ಹೊಸ ರೂಪಾಂತರಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯನ್ನು ಸಾಧಿಸಿದೆ. ಇದನ್ನು ಮೂರು ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು ಮತ್ತು ಸಂಸ್ಕರಿಸಿದ ಸಕ್ಕರೆ ಇಲ್ಲದ ಹೊಸ ಸೆರೆಲ್ಯಾಕ್ ರೂಪಾಂತರಗಳ ಪರಿಚಯದೊಂದಿಗೆ ಈ ವರ್ಷ ಒಂದು ಉಚ್ಛ್ರಾಯದ ವರ್ಷ. ಭಾರತದಲ್ಲಿ ಸೆರೆಲ್ಯಾಕ್ ಶ್ರೇಣಿ, ಈಗ 21 ರೂಪಾಂತರಗಳನ್ನು ಒಳಗೊಂಡಿದೆ. ಅದರಲ್ಲಿ 14 ರೂಪಾಂತರಗಳಲ್ಲಿ ಸಂಸ್ಕರಿಸಿದ ಸಕ್ಕರೆ ಇಲ್ಲ. ಈ 14 ರೂಪಾಂತರಗಳು, 7 ನವೆಂಬರ್ 2024 ರ ಅಂತ್ಯದ ವೇಳೆಗೆ ಲಭ್ಯವಿರುತ್ತವೆ ಮತ್ತು ಉಳಿದವು ಮುಂಬರುವ ವಾರಗಳಲ್ಲಿ ಲಭ್ಯವಿರುತ್ತವೆ.

ಸೆರೆಲ್ಯಾಕ್ ನ ಗುರಿ, ಸುರಕ್ಷಿತ ಪೋಷಣೆಯನ್ನು ಒದಗಿಸುವುದು ಮಾತ್ರವಲ್ಲ; ಸಮುದಾಯ ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದೂ ಆಗಿರುತ್ತದೆ. ನೆಸ್ಲೆ ಇಂಡಿಯಾ ಸ್ಥಳೀಯ ರೈತರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ; ಸುಸ್ಥಿರ ಮತ್ತು ಜವಾಬ್ದಾರಿಯುತ ಪದಾರ್ಥಗಳನ್ನು ಒದಗಿಸಲು ಅವರಿಗೆ ಕೌಶಲ್ಯ ಮತ್ತು ತರಬೇತಿ ನೀಡುತ್ತದೆ; ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಪೀಳಿಗೆಗಾಗಿ ಈ ಭೂಮಿಯನ್ನು ಸಂರಕ್ಷಿಸುತ್ತದೆ. ಮೊಗಾ ಮತ್ತು ಸಮಲ್ಖಾ ಕಾರ್ಖಾನೆಗಳಲ್ಲಿ ಸೆರ್ ಆವ್ (Zer’ Eau) ತಂತ್ರಜ್ಞಾನದ ಯಶಸ್ವಿ ಅನುಷ್ಠಾನದ ಮೂಲಕ, ಪ್ರತಿ ವರ್ಷ ಅಂತರ್ಜಲ ಬಳಕೆಯನ್ನು ಕಡಿಮೆ ಮಾಡಲು ಹಾಲಿನಿಂದ ತೆಗೆದ ನೀರನ್ನು ಮರುಬಳಕೆ ಮಾಡಲಾಗುತ್ತದೆ; ಇದರಿಂದಾಗಿ ಅಂತರ್ಜಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ಹಲವು ದಶಕಗಳಿಂದಲೂ ನೆಸ್ಲೆ, ಭಾರತದಾದ್ಯಂತ ರೈತರು, ಪೂರೈಕೆದಾರರು ಮತ್ತು ವಿತರಕರೊಂದಿಗೆ ಮೂಡಿಸಿರುವ ನಂಬಿಕೆ, ಬೆಂಬಲ ಮತ್ತು ಪಾಲುದಾರಿಕೆಯಿಂದಾಗಿ ಭಾರತದಲ್ಲಿ ಸೆರೆಲ್ಯಾಕ್ ಬಹಳ ಜನಮಾನ್ಯತೆ ಪಡೆದಿದೆ. ನೆಸ್ಲೆ ಇಂಡಿಯಾ ತನ್ನ ಉತ್ಪನ್ನಗಳನ್ನು ಆವಿಷ್ಕರಿಸಲು ಮತ್ತು ಗ್ರಾಹಕರಿಗೆ ಸಮಕಾಲೀನ, ಪೌಷ್ಟಿಕ ಮತ್ತು ಸ್ಥಳೀಯ ರುಚಿ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ಹೆಚ್ಚಿನ ಆಯ್ಕೆಗಳನ್ನು ನೀಡಲು ನೆಸ್ಲೆಯ ಜಾಗತಿಕ ಆರ್&ಡಿ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...