ನವದೆಹಲಿ: ಗೃಹ ಸಚಿವಾಲಯದ ಆದೇಶದ ಮೇರೆಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಅವರಿಗೆ ದೆಹಲಿ ಪೊಲೀಸರು Z+ ರಕ್ಷಣೆ ಒದಗಿಸಿದ್ದಾರೆ.
ಸುಮಾರು 33 ಶಸ್ತ್ರಸಜ್ಜಿತ ದೆಹಲಿ ಪೊಲೀಸ್ ಅಧಿಕಾರಿಗಳು ಚೌಹಾಣ್ ಅವರ ನಿವಾಸದಲ್ಲಿ ಮತ್ತು ಅವರ ಪ್ರಯಾಣದ ಸಮಯದಲ್ಲಿ ಭದ್ರತೆ ಒದಗಿಸಲಿದ್ದಾರೆ.
MHA ನಿರ್ದೇಶನದ ಮೇರೆಗೆ CDS ಜನರಲ್ ಅನಿಲ್ ಚೌಹಾಣ್ ಅವರಿಗೆ Z+ ರಕ್ಷಣೆಯನ್ನು ಒದಗಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೌಹಾಣ್ ಅವರನ್ನು ಶುಕ್ರವಾರ ಭಾರತದ ರಕ್ಷಣಾ ಸಿಬ್ಬಂದಿಯ ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಮೊದಲ CDS ಜನರಲ್ ಬಿಪಿನ್ ರಾವತ್ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ 9 ತಿಂಗಳ ನಂತರ ಮಾಜಿ ಈಸ್ಟರ್ನ್ ಆರ್ಮಿ ಆಫೀಸರ್ ಜನರಲ್ ಚೌಹಾಣ್ ಅವರು ದೇಶದ ಅತ್ಯಂತ ಹಿರಿಯ ಮಿಲಿಟರಿ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡರು.
CDS ಎಲ್ಲಾ ಸೇನಾ ವಿಷಯಗಳಲ್ಲಿ ರಕ್ಷಣಾ ಸಚಿವರ ಪ್ರಧಾನ ಮಿಲಿಟರಿ ಸಲಹೆಗಾರ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದು, ಅವರು ಅನಿರ್ದಿಷ್ಟ ಆಧಾರದ ಮೇಲೆ ಚೀಫ್ಸ್ ಆಫ್ ಸ್ಟಾಫ್ ಕಮಿಟಿಯ ಅಧ್ಯಕ್ಷರೂ ಆಗಿದ್ದಾರೆ. ಮೊದಲ ಬಾರಿಗೆ ನಿವೃತ್ತ ತ್ರಿಸ್ಟಾರ್ ಅಧಿಕಾರಿಯೊಬ್ಬರು ಫೋರ್ ಸ್ಟಾರ್ ಸ್ಥಾನಮಾನಕ್ಕೆ ಬಡ್ತಿ ಪಡೆದಿದ್ದಾರೆ.