ಬೆಂಗಳೂರು: ಇನ್ನೂ ಹಲವರ ರಾಸಲೀಲೆ ಸಿಡಿ ಇವೆ ಎಂದು ಹೇಳಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ರಮೇಶ ಜಾರಕಿಹೊಳಿ ಅವರದ್ದೆನ್ನಲಾದ ಸಿಡಿ ಬಹಿರಂಗ ವಿಚಾರವಾದ ನಂತರ ರಾಜ್ಯದಲ್ಲಿ ಸಿಡಿ ವಿಚಾರದ ಕುರಿತಾಗಿ ಭಾರಿ ಚರ್ಚೆ ನಡೆದಿದೆ. ರಾಜಕೀಯದಲ್ಲೂ ಅಲ್ಲೋಲ ಕಲ್ಲೋಲ ಸೃಷ್ಠಿಸಿದೆ.
19 ರಾಸಲೀಲೆ ಸಿಡಿ ಇರುವುದಾಗಿ ಅನೇಕರು ಹೇಳಿಕೊಂಡಿದ್ದಾರೆನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಶೇಖರ ಮುಲಾಲಿ ಅವರಿಗೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.