ಬೆಂಗಳೂರು: ಸಿಡಿಯಲ್ಲಿದ್ದ ಯುವತಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ ಮಾಡಲಾಗಿದೆ. ಮಾರ್ಚ್ 2 ರಂದು ಸಿಡಿ ಬಿಡುಗಡೆಯಾಗಿತ್ತು. ಆ ಸಿಡಿಯನ್ನು ಯಾರು ಬಿಡುಗಡೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಮಾಧ್ಯಮಗಳಲ್ಲಿ ವಿಡಿಯೋ ಬರುತ್ತಿರುವುದನ್ನು ನೋಡಿ ಮನೆಯಿಂದ ಕರೆ ಮಾಡಲಾಗಿತ್ತು ಎಂದು ಯುವತಿ ಹೇಳಿದ್ದಾರೆ.
ನಾನು ನರೇಶ್ ಅಣ್ಣನಿಗೆ ಕರೆಮಾಡಿ ಮಾತನಾಡಿದೆ. ಏನು ಮಾಡಲಿ ಅಣ್ಣ ಎಂದು ಆತನಿಗೆ ಕೇಳಿದ್ದೆ. ಈ ವಿಚಾರದಲ್ಲಿ ನಾನು ತುಂಬಾ ಚಿಕ್ಕವನು ಎಂದಿದ್ದರು. ಇದಕ್ಕೆ ಪೊಲಿಟಿಕಲ್ ಸಪೋರ್ಟ್ ಬೇಕೆಂದು ಹೇಳಿದ್ದರು. ತುಂಬಾ ದೊಡ್ಡವರ ಜೊತೆ ಮಾತನಾಡೋಣ ಎಂದು ತಿಳಿಸಿದ್ದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜೊತೆ ಮಾತನಾಡೋಣ ಎಂದು ಹೇಳಿದ್ದರು. ಅವರ ಜೊತೆ ಮಾತನಾಡಿದರೆ ನ್ಯಾಯ ಸಿಗುತ್ತದೆ ಎಂದು ನರೇಶ್ ಅಣ್ಣ ನನಗೆ ತಿಳಿಸಿದ್ದರು ಎಂದು ಯುವತಿ ತಿಳಿಸಿದ್ದಾಳೆ.
ಈ ರೀತಿಯಾಗಿ ನಾನಿರುವ ಜಾಗಕ್ಕೆ ನರೇಶ್ ಅಣ್ಣ ಅವರು ಬಂದಿದ್ದರು. ಡಿ.ಕೆ. ಶಿವಕುಮಾರ್ ಮನೆಗೆ ಹೋಗೋಣ ಎಂದಿದ್ದರು. ಆ ಸಮಯದಲ್ಲಿ ನಮ್ಮ ಮನೆಯಿಂದ ಪದೇ ಪದೇ ಕರೆ ಬಂದಿತ್ತು. ನಮ್ಮ ಮನೆಯವರು ಅಳುವುದನ್ನು ಕೇಳಿ ಅವರ ಜೀವಕ್ಕೆ ಏನಾದರೂ ಆಗುತ್ತದೆ ಎಂಬ ಭಯವಾಗಿತ್ತು. ಆಗ ನಮ್ಮ ಪೋಷಕರನ್ನು ನಾನು ಸಮಾಧಾನ ಮಾಡಿದೆ. ಡಿಕೆಶಿ ಮನೆಗೆ ಹೋಗುತ್ತಿದ್ದೇವೆ ಎಂದು ಅವರಿಗೆ ಹೇಳಿದ್ದೆ. ನಾವು ಡಿಕೆಶಿ ಮನೆಯ ಬಳಿ ಹೋಗಿದ್ದೆವು. ಆದರೆ ಅವರು ಸಿಕ್ಕಿರಲಿಲ್ಲ. ಭೇಟಿಗೆ ಹೋದಾಗ ಡಿ.ಕೆ. ಶಿವಕುಮಾರ್ ಭೇಟಿಗೆ ಹೋದಾಗ ಅವರು ಸಿಕ್ಕಿರಲಿಲ್ಲ ಎಂದು ತಿಳಿಸಿದ್ದಾರೆ.
ನಾನು ಸೇಫ್ ಆಗಿದ್ದೇನೆ. ನಮ್ಮ ಪೋಷಕರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ. ನಮ್ಮ ತಂದೆ-ತಾಯಿ, ಅಜ್ಜಿ, ಸಹೋದರರಿಗೆ ರಕ್ಷಣೆ ನೀಡಿ. ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ರಕ್ಷಣೆ ಕೊಡಿ ಎಂದು ಎಸ್ಐಟಿ ಅಧಿಕಾರಿಗಳಿಗೆ ಯುವತಿ ಮನವಿ ಮಾಡಿಕೊಂಡಿದ್ದಾರೆ.
ಕಳೆದ 24 ದಿನಗಳಿಂದ ತುಂಬಾ ಟಾರ್ಚರ್ ಆಗುತ್ತಿದೆ. ನಾನು ಏನು ಹೇಳಲು ಬಂದರೂ ಅದು ರಿವರ್ಸ್ ಆಗುತ್ತಿದೆ. ನನ್ನ ಮಾನ, ಮರ್ಯಾದೆ ಹೋಗಿದೆ. ನ್ಯಾಯ ಸಿಗಬೇಕು. ನಾನು ಸಂತ್ರಸ್ತೆಯಾಗಿರುವುದರಿಂದ ನ್ಯಾಯ ಸಿಗಬೇಕು ಎಂದು ಯುವತಿ ಹೇಳಿದ್ದಾರೆ.