ಸಿಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಬಣ ತೋರಿಸುತ್ತಿರುವ ಆಸಕ್ತಿಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆಗೂ ಪರಸ್ಪರ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿದೆ.
ಸಿಡಿ ಷಡ್ಯಂತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಸರು ಕೇಳಿಬಂದಿರುವುದರಿಂದ ಪ್ರಕರಣವನ್ನು ಸಿದ್ದರಾಮಯ್ಯನವರ ಬಣ ಮುನ್ನೆಲೆಗೆ ತರುತ್ತಿದೆ. ಸಿಡಿ ಪ್ರಕರಣದಲ್ಲಿ ಡಿ.ಕೆ. ಶಿವಕುಮಾರ್ ಕಳೆದುಕೊಂಡಷ್ಟು ಸಿದ್ದರಾಮಯ್ಯನವರಿಗೆ ಲಾಭವಿದೆ ಎಂದು ಬಿಜೆಪಿ ಹೇಳಿದೆ.
ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆದರೆ ನೋವಾಗುತ್ತದೆ. ಕಾಲ ಕೂಡಿ ಬಂದರೆ ಮತ್ತೊಮ್ಮೆ ಅವರು ಮುಖ್ಯಮಂತ್ರಿ ಆಗಲಿದ್ದಾರೆ. ಅವರನ್ನು ಮಾಜಿ ಮುಖ್ಯಮಂತ್ರಿ ಎನ್ನುವುದು ಅಪಮಾನ ಮಾಡಿದಂತೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೀಡಿದ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿ, ಸಿಡಿ ಪ್ರಕರಣದಲ್ಲಿ ಸಿದ್ದರಾಮಯ್ಯ ಬಣ ತೋರುತ್ತಿರುವ ಆಸಕ್ತಿಗೂ ರಮೇಶ್ ಕುಮಾರ್ ಹೇಳಿಕೆಗೂ ಪರಸ್ಪರ ಸಂಬಂಧವಿದೆ. ಇದರಲ್ಲಿ ಡಿಕೆಶಿ ಕಳೆದುಕೊಂಡಷ್ಟೂ ಸಿದ್ದರಾಮಯ್ಯನವರಿಗೆ ಲಾಭವಿದೆ ಎಂದು ಹೇಳಲಾಗಿದೆ.