ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಕೇಸ್ ನ ಮತ್ತೊಂದು ಸ್ಫೋಟಕ ಸುದ್ದಿ ಬಯಲಾಗಿದೆ. ಸಂತ್ರಸ್ತ ಯುವತಿ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಮೂಲಕ ಸಿಡಿ ಯುವತಿಗೆ ಬಿಗ್ ಶಾಕ್ ಆಗುವ ಬೆಳವಣಿಗೆ ನಡೆದಿದೆ. ನಮ್ಮ ಮಗಳ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಆಕೆಯ ತಂದೆ ಹೇಳಿದ್ದು, ಸಿಆರ್ಪಿಸಿ 164 ರ ಅಡಿಯಲ್ಲಿ ದಾಖಲಾದ ಹೇಳಿಕೆ ರದ್ದು ಮಾಡಬೇಕೆಂದು ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ ಯುವತಿ ಎಸ್ಐಟಿ ಎದುರು ಹೇಳಿಕೆ ನೀಡಿ ವಿಚಾರಣೆ ಎದುರಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ನಮ್ಮ ಮಗಳ ಹೇಳಿಕೆಯನ್ನು ಪರಿಗಣಿಸಬಾರದೆಂದು ಸಂತ್ರಸ್ತೆಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.