alex Certify ಪುಟ್ಟ ಮಗುವಿನ ಮೇಲೆ ಮನೆಗೆಲಸದವಳ ಅಮಾನವೀಯ ವರ್ತನೆ; ಸಿಸಿ ಟಿವಿ ಮೂಲಕ ಬಹಿರಂಗವಾಯ್ತು ರಾಕ್ಷಸಿ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮಗುವಿನ ಮೇಲೆ ಮನೆಗೆಲಸದವಳ ಅಮಾನವೀಯ ವರ್ತನೆ; ಸಿಸಿ ಟಿವಿ ಮೂಲಕ ಬಹಿರಂಗವಾಯ್ತು ರಾಕ್ಷಸಿ ಕೃತ್ಯ

ಕೇವಲ ಎರಡು ವರ್ಷದ ಪುಟ್ಟ ಮಗುವಿನ ಮೇಲೆ ಮನೆಕೆಲಸದಾಕೆ ರಾಕ್ಷಸಿ ವರ್ತನೆ ತೋರಿದ್ದಾಳೆ. ಆಕೆಯ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿ ಮಗುವಿನ ಪೋಷಕರು ಬೆಚ್ಚಿಬಿದ್ದಿದ್ದಾರೆ. ಇಂಥದೊಂದು ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.

ಈ ಮಗುವಿನ ತಂದೆ – ತಾಯಿ ಇಬ್ಬರೂ ಸಹ ಉದ್ಯೋಗದಲ್ಲಿದ್ದು, ಹೀಗಾಗಿ ಮಗುವನ್ನು ನೋಡಿಕೊಳ್ಳಲು ಮಹಿಳೆಯೊಬ್ಬರನ್ನು ನೇಮಿಸಿದ್ದರು. ಇದಕ್ಕಾಗಿ ಆಕೆಗೆ ತಿಂಗಳಿಗೆ ಐದು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದು, ಜೊತೆಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಸಹ ಮಾಡಿದ್ದರು.

ಇತ್ತೀಚಿಗೆ ತಮ್ಮ ಮಗುವಿನ ವರ್ತನೆಯಲ್ಲಿ ಒಂದಷ್ಟು ಬದಲಾವಣೆಗಳನ್ನು ಗಮನಿಸಿದ ಪೋಷಕರು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮನೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಿಸಿ ಟಿವಿ ಅಳವಡಿಸಿದ್ದಾರೆ.

ಇದಾದ ಒಂದೆರಡು ದಿನಗಳ ಬಳಿಕ ಸಿಸಿ ಟಿವಿ ದೃಶ್ಯ ನೋಡಿ ಮಗುವಿನ ಪೋಷಕರು ಬೆಚ್ಚಿ ಬಿದ್ದಿದ್ದಾರೆ. ಮನೆಕೆಲಸದಾಕೆ ಮಗುವಿನ ಜೊತೆ ಅಕ್ಷರಶಃ ರಾಕ್ಷಸಿ ವರ್ತನೆ ತೋರಿದ್ದು ಮನಬಂದಂತೆ ಥಳಿಸಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲ ಮಗುವನ್ನು ಕೂದಲಿಡಿದು ದರದರನೆ ಎಳೆದುಕೊಂಡು ಹೋಗಿದ್ದಾಳೆ. ಇದೀಗ ಮಗುವಿನ ಪೋಷಕರು ಕೆಲಸದಾಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...