ಅಪಾರ್ಟ್‌ಮೆಂಟ್‌ನಲ್ಲಿನ ಮನೆಯ ಬಾಗಿಲಿಗೆ ಮುಸುಕುಧಾರಿಗಳಿಬ್ಬರು ಗುಂಡು ಹಾರಿಸಿರೋ ಘಟನೆ ಆಗ್ನೇಯ ದೆಹಲಿಯ ಸಿದ್ಧಾರ್ಥ್ ನಗರದಲ್ಲಿ ನಡೆದಿದೆ.
ಸನ್‌ಲೈಟ್ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳು ಹಿಪ್ನೋಥೆರಪಿಸ್ಟ್ ಸೋಹೈಲ್ ಸಿದ್ದಿಕಿಗೆ ಸೇರಿದ ಮೊದಲ ಮಹಡಿಯಲ್ಲಿನ ಫ್ಲಾಟ್ ಬಾಗಿಲಿಗೆ ಎರಡು ಗುಂಡು ಹಾರಿಸಿದ್ದಾರೆ.
ನಂತರ ನೆಲಮಹಡಿಗೆ ಹೋದ ಆರೋಪಿಗಳು ಅಲ್ಲಿಯೂ ಮತ್ತೊಂದು ಮನೆಯ ಕಿಟಕಿಗೆ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟಾರ್ಗೆಟ್ ಆಗಿರುವ ಅಪಾರ್ಟ್‌ಮೆಂಟ್ ಸದ್ಯ ಬಾಡಿಗೆಯಲ್ಲಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.