ರಾಜ್ಯ ಸಭೆಯಲ್ಲಿ ನಡೆದ ಮಾರಾಮಾರಿಯೊಂದರ ಸಿಸಿ ಟಿವಿ ಫುಟೇಜ್‌ಗಳು ಹೊರಬಂದಿದ್ದು, ಮೇಲ್ಮನೆಯ ಮಾರ್ಷಲ್‌ಗಳೊಂದಿಗೆ ವಿಪಕ್ಷಗಳ ಸಂಸದರು ಕೈಕೈ ಮಿಲಾಯಿಸುತ್ತಿರುವ ದೃಶ್ಯಗಳನ್ನು ನೋಡಬಹುದಾಗಿದೆ.
ವಿಮಾ ಕಂಪನಿಗಳ ಖಾಸಗೀಕರಣ ಮಾಡುವ ಸಂಬಂಧ ವಿಮಾ ತಿದ್ದುಪಡಿ ಮಸೂದೆಯ ಅಂಗೀಕಾರದ ವೇಳೆ ರಾಜ್ಯ ಸಭೆಯಲ್ಲಿ ವಿಪಕ್ಷಗಳ ನಾಯಕರು ಗಲಾಟೆ ಮಾಡಿದ್ದರು. ರಾಜ್ಯ ಸಭೆಯ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ದಾಳಿ ಮಾಡಿದ್ದಾಗಿ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಸಂಸದರು ಆಪಾದಿಸಿದ್ದರು.
“400ಕ್ಕೆಲ್ಲಾ ಇಂಥದ್ದೇ ಸೀರೆ ಸಿಗುತ್ತೆ”: ಪ್ರಖ್ಯಾತ ಡಿಸೈನರ್‌ನ ದುಬಾರಿ ವಸ್ತ್ರಗಳೀಗ ಟ್ರೋಲ್ ಐಟಂ
ಗಲಾಟೆ ಮಾಡುತ್ತಿದ್ದ ಮೇಲ್ಮನೆ ಸಂಸದರು ಚೇರ್ಮನ್‌ರ ಪೋಡಿಯಂ ಬಳಿಗೆ ಹೋಗದಂತೆ ತಡೆಗಟ್ಟಲು ಮಾರ್ಷಲ್‌ಗಳು ಮಾನವ ಸರಪಳಿ ಮಾಡಿರುವುದನ್ನು ಸಿಸಿಟಿವಿ ಫುಟೇಜ್‌ನಲ್ಲಿ ನೋಡಬಹುದಾಗಿದೆ.