
ತನ್ನ ಲಿವ್ ಇನ್ ರಿಲೇಷನ್ ಶಿಪ್ ಪಾಲುದಾರೆ ಶ್ರದ್ಧಾ ವಾಕರ್ನನ್ನು ಬರ್ಬರವಾಗಿ ಕೊಂದ ಆರೋಪದ ಮೇಲೆ ಪೊಲೀಸ್ ಕಸ್ಟಡಿಯಲ್ಲಿರುವ ಅಫ್ತಾಬ್ ಹೆಜ್ಜೆ ಗುರುತಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಹೊರಬಂದಿದ್ದು, ಅದರಲ್ಲಿ ಆತ ಬ್ಯಾಗ್ನೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮೂಲಗಳ ಪ್ರಕಾರ ಸಿಸಿ ಕ್ಯಾಮೆರಾದ ದೃಶ್ಯದಲ್ಲಿ ಅಕ್ಟೋಬರ್ 18 ರ ನಸುಕಿನ ಸುಮಾರು 4 ಗಂಟೆಯ ಸಮಯ ಎಂಬುದು ಗೊತ್ತಾಗಿದೆ.
ತನಿಖಾಧಿಕಾರಿಗಳು ದೃಶ್ಯಗಳಿಗೆ ಸಂಬಂಧಿಸಿದಂತೆ ಅವನನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ. ಏಕೆಂದರೆ ಶ್ರದ್ಧಾಳ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅವಶೇಷಗಳನ್ನು ಬ್ಯಾಗ್ ನಲ್ಲಿ ತೆಗೆದುಕೊಂಡು ಹೋಗುತ್ತಿರಬಹುದು ಎಂದು ಶಂಕಿಸಿದ್ದಾರೆ.
ಮೇ 18 ರಂದು ನಡೆದ ಕೊಲೆಯ ನಂತರ ಶ್ರದ್ಧಾಳ ದೇಹವನ್ನು ತುಂಡುಗಳಾಗಿ ಕತ್ತರಿಸಿದ ನಂತರ ಅದನ್ನು ಅಫ್ತಾಬ್ ಚತ್ತರ್ಪುರದ ಬಾಡಿಗೆ ಮನೆಯಲ್ಲಿ ಫ್ರಿಡ್ಜ್ನಲ್ಲಿ ಇರಿಸಿದ್ದ. ನಂತರ ರಾಷ್ಟ್ರ ರಾಜಧಾನಿಯಾದ್ಯಂತ ಅವಶೇಷಗಳನ್ನು 18 ದಿನಗಳವರೆಗೆ ಪ್ರತಿದಿನ 2 ತುಂಡುಗಳಂತೆ ಕಾಡಿನಲ್ಲಿ ಎಸೆದಿದ್ದ.