alex Certify ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೈದರಾಬಾದ್​ ಗೋದಾಮು ದುರಂತದ ಭಯಾನಕ ದೃಶ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಹೈದರಾಬಾದ್​ ಗೋದಾಮು ದುರಂತದ ಭಯಾನಕ ದೃಶ್ಯ..!

ಬುಧವಾರ ಬೆಳಗ್ಗೆ ಹೈದರಾಬಾದ್​​ನ ಭೋಯಿಗುಡಾ ಪ್ರದೇಶದಲ್ಲಿ ಗೋದಾಮಿಗೆ ಹೊತ್ತಿಕೊಂಡ ಬೆಂಕಿಯಿಂದಾಗಿ 11 ಮಂದಿ ಸಜೀವ ದಹನವಾಗಿದ್ದರು. ಇದೀಗ ಈ ದುರ್ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು ಎದೆ ಝಲ್​ ಎನಿಸುವಂತಿದೆ.

ಈ ದುರ್ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಪ್ರೇಮ್​​ ಕುಮಾರ್​, ಕಿಟಕಿಯ ಗ್ರಿಲ್​​ಗಳನ್ನು ಮುರಿದು ಗೋದಾಮಿನಿಂದ ಹೊರಬಂದಿದ್ದಾರೆ. ಈ ವ್ಯಕ್ತಿಯು ಗೋದಾಮಿನಿಂದ ಹೊರಬರುತ್ತಿದ್ದಂತೆಯೇ ವೇರ್ ಹೌಸ್​ ಸ್ಫೋಟಗೊಂಡಿದೆ.

ಹೈದರಾಬಾದ್​ ಪೊಲೀಸರು ವೇರ್ ಹೌಸ್ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಸ್ತುತ ಮಾಲೀಕ ತಲೆಮರೆಸಿಕೊಂಡಿದ್ದು ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...