ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ (ಸಿಸಿಎಲ್) ಕಡೆಯಿಂದ ತನ್ನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು 539 ಮಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಎಲೆಕ್ಟ್ರಿಷಿಯನ್, ಫಿಟ್ಟರ್, ಮಷಿನಿಸ್ಟ್, ಟರ್ನರ್ ಹಾಗೂ ಪ್ಲಂಬರ್ ಸೇರಿದಂತೆ ಇನ್ನೂ ವಿವಿಧ ಕೌಶಲಪೂರ್ಣ ಕೆಲಸಗಳಿಗಾಗಿ ಪರಿಣಿತರನ್ನು ಸಿಸಿಎಲ್ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಅರ್ಹ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿನವರಾಗಿರಬೇಕು. ಎಸ್‌ಸಿ-ಎಸ್‌ಟಿ ವರ್ಗಕ್ಕೆ ಸ್ವಲ್ಪ ವಯಸ್ಸಿನ ವಿನಾಯಿತಿ ನೀಡಲಾಗುವುದು. ಈಗಾಗಲೇ ನವೆಂಬರ್ 20 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ಡಿ.5 ಕೊನೆಯ ದಿನವಾಗಿದೆ.
ಆಸಕ್ತ ಅಭ್ಯರ್ಥಿಗಳು https://www.apprenticeshipindia.gov.in/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನರ್ತಕಿ ಧರಿಸಿರುವ ಉಡುಪಿನ ನಿಜವಾದ ಬಣ್ಣವನ್ನು ಊಹಿಸಬಲ್ಲಿರಾ..?
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 7000 ರೂ. ಗೌರವ ಧನವನ್ನು ಸಿಸಿಎಲ್ ವತಿಯಿಂದ ನೀಡಲಾಗುವುದು. 1975ರಲ್ಲಿ ಸ್ಥಾಪನೆಗೊಂಡ ಸಿಸಿಎಲ್, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಅಂಗಸಂಸ್ಥೆಯಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿಸಿಎಲ್, ಒಟ್ಟಾರೆ ದೇಶಾದ್ಯಂತ 65 ಸಕ್ರಿಯ ಗಣಿಗಳನ್ನು ನಿರ್ವಹಿಸುತ್ತಿದೆ.
2019ರ ಮಾಹಿತಿ ಅನ್ವಯ ಸಿಸಿಎಲ್‌ನಲ್ಲಿ ಒಟ್ಟು 39,222 ಉದ್ಯೋಗಿಗಳು ಇದ್ದಾರೆ. ಸದ್ಯ ಸಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಪಿ.ಎಂ. ಪ್ರಸಾದ್ ಅವರು ಕಾರ್ಯನಿರ್ವಹಿಸುತ್ತಿದ್ದು, 2018-19ನೇ ಸಾಲಿನಲ್ಲಿ ಸಂಸ್ಥೆಯು 1704.47 ಕೋಟಿ ರೂ. ಕಲ್ಲಿದ್ದಲು ಗಣಿಗಾರಿಕೆಯಿಂದ ಲಾಭ ಗಳಿಸಿದೆ.