ಬೆಂಗಳೂರು: ರೌಡಿಶೀಟರ್ ಗಳು, ಮೀಟರ್ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಅನಿಲ್ ಕುಮಾರ್, ಯಶವಂತಪುರ ರೌಡಿಶೀಟರ್ ರಾಬರಿ ಗಿರಿ, ವಿವೇಕನಗರ ರೌಡಿಶೀಟರ್ ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
ಅನಿಲ್ ಮನೆಯಲ್ಲಿ ಆಸ್ತಿ ಪತ್ರಗಳು, ಚೆಕ್ ಗಳು ಪತ್ತೆಯಾಗಿವೆ. ಅಮಾಯಕರನ್ನು ಬೆದರಿಸಿ ನಿವೇಶನ ಕಬಳಿಸುವ ಆರೋಪ ಅನಿಲನ ಮೇಲಿದೆ. ಉದ್ಯಮಿ ಕೃಷ್ಣೇಗೌಡ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ದಿನದ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಅಗ್ರಿಮೆಂಟ್ ಪೇಪರ್ ಗಳು, ಚೆಕ್ ಗಳು ಪತ್ತೆಯಾಗಿದ್ದು, ದಾಖಲೆ ಪತ್ರಗಳನ್ನು ಜಪ್ತಿ ಮಾಡಿ ಪರಿಶೀಲಿಸಲಾಗಿದೆ.