alex Certify ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ದಾಳಿ, ಮಹಿಳೆಯರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ದಾಳಿ, ಮಹಿಳೆಯರ ರಕ್ಷಣೆ

ಬೆಂಗಳೂರಿನ ವಿವಿಧ ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿದೇಶಿಯರು ಸೇರಿದಂತೆ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ದೇಶ ಹಾಗೂ ವಿದೇಶಗಳಿಂದ ಮಹಿಳೆಯರನ್ನು ಕರೆತಂದು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಉತ್ತರ ಭಾರತ ಮೂಲದ ದೇವೇಂದರ್ ಮತ್ತು ಅಭಿಜಿತ್ ಎಂಬವರನ್ನು ಬಂಧಿಸಲಾಗಿದೆ.

ಟರ್ಕಿ ಹಾಗೂ ನೇಪಾಳ ದೇಶದ ಇಬ್ಬರು ಮಹಿಳೆಯರು, ಅಸ್ಸಾಂನ ಮೂವರು, ಪಶ್ಚಿಮಬಂಗಾಳದ ಮೂವರು, ದೆಹಲಿ, ನಾಗಾಲ್ಯಾಂಡ್ ಹಾಗೂ ಸ್ಥಳೀಯ ಮಹಿಳೆಯರನ್ನು ಕೂಡ ರಕ್ಷಿಸಲಾಗಿದೆ.

ಹೆಚ್ಎಸ್ಆರ್ ಲೇಔಟ್, ಅಶೋಕನಗರ, ಮಡಿವಾಳ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕೆಲಸದ ಆಮಿಷ ತೋರಿಸಿ ಮಹಿಳೆಯರನ್ನು ಕರೆತಂದು ಸ್ಪಾಗಳಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Vynikající večeře: recept Potraviny, které vám nejvíce škodí: denně je Rychlá hádanka pro Komunikativní nebo uzavřená osoba: Překvapivý optický klam