ಬೆಂಗಳೂರು: ಪೊಲೀಸ್ ಇನ್ ಫಾರ್ಮರ್ ಎಂದು ಹೇಳಿಕೊಂಡು ಪೊಲೀಸರಿಗೇ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಈತ ಪೊಲೀಸರಿಗೆ ವಂಚಿಸುತ್ತಾ ಪಬ್, ಬಾರ್ ಗಳಲ್ಲಿ ಮೋಜು ಮಸ್ತಿ ಮಾಡಿಕೊಂಡಿದ್ದ. ಬಂಧಿತ ಆರೋಪಿಯನ್ನು ವಸೀಂ ಎಂದು ಗುರುತಿಸಲಾಗಿದೆ.
ಪೊಲೀಸರ ಜೊತೆಗಿದ್ದುಕೊಂಡು ಅವರಿಗೆ ಸಹಾಯ ಮಾಡುತ್ತಿರುವಂತೆ ನಾಟಕವಾಡಿ ಅವರಿಂದಲೇ ಹಣ ಪಡೆಯುತ್ತಿದ್ದ. ಯಾವುದೋ ಜಾಗದಲ್ಲಿ ದಂಧೆ ನಡೆಯುತ್ತಿದೆ. ಅಲ್ಲಿಗೆ ಹೋಗಿ ನೋಡಿ ವಿಷಯ ತಿಳಿದುಕೊಳ್ತೀನಿ ಬಳಿಕ ಲೊಕೇಶನ್ ಕಳಿಸ್ತೀನಿ ಎಂದು ಹೇಳುತ್ತಿದ್ದ. ಅಲ್ಲದೇ ಬೈಕ್ ಪ್ರಾಬ್ಲಂ ಆಗಿದೆ. ಪೆಟ್ರೋಲ್ ಮುಗಿದು ಹೋಯ್ತು. ಮನೆಯಲ್ಲಿ ತುಂಬಾ ಸಮಸ್ಯೆಯಿದೆ ಎಂದು ನಂಬಿಸಿ ಪೊಲೀಸರಿಂದ ಗೂಗಲ್ ಪೇ ಮೂಲಕ ಹಣ ಪಡೆದು ಹಣ ಬಂದ ಬಳಿಕ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದ.
ಸದ್ಯ ವಂಚಕನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.