alex Certify ಬಿಗ್‌ ನ್ಯೂಸ್: CBSE 9 – 10ನೇ ತರಗತಿ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: CBSE 9 – 10ನೇ ತರಗತಿ ವಿದ್ಯಾರ್ಥಿಗಳ ನೋಂದಣಿಗೆ ದಿನಾಂಕ ನಿಗದಿ

9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್​ 15ರಿಂದ ರಿಜಿಸ್ಟ್ರೇಷನ್​​ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್​​ ಅಧಿಕೃತ ಮಾಹಿತಿ ನೀಡಿದೆ.

ಸಿಬಿಎಸ್​​ಇ ವೆಬ್​ಸೈಟ್​​ನಲ್ಲಿ ನೋಂದಣಿಗೆ ಲಿಂಕ್​ ನೀಡಲಾಗಿದೆ. ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಒಂಬತ್ತು ಹಾಗೂ ಹತ್ತನೇ ತರಗತಿಗೆ ಆನ್​ಲೈನ್​ ಪೋರ್ಟಲ್​​ ಮೂಲಕ ನೋಂದಾಯಿಸಬಹುದು ಎಂದು ಮಂಡಳಿ ಅಧಿಕೃತ ಮಾಹಿತಿ ನೀಡಿದೆ.

ಆನ್​ಲೈನ್​ ನೋಂದಣಿ ಪ್ರಕ್ರಿಯೆ ಮೂಲಕ ಹೆಸರು ಸಲ್ಲಿಸಿದ 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ 2022-23 ನೇ ಸಾಲಿನ ಬೋರ್ಡ್​ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ನೀಡಲಾಗುತ್ತದೆ ಎಂದು ಸಿಬಿಎಸ್ಇ​ ಸ್ಪಷ್ಟಪಡಿಸಿದೆ.

ಸಂಬಂಧಪಟ್ಟ ಶಾಲೆಗಳು ವಿದ್ಯಾರ್ಥಿಗಳನ್ನು ಆನ್​ಲೈನ್​ ನೋಂದಣಿ ಮಾಡುವ ಮುನ್ನ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಳ್ಳಬೇಕೆಂದು ಸಿಬಿಎಸ್​ಇ ಹೇಳಿದೆ. ಶಾಲೆಗಳು ಸಂಬಂಧಿತ ಸಂಖ್ಯೆಯನ್ನು ಬಳಕೆದಾರರ ಐಡಿ ಎಂದು ಬಳಕೆ ಮಾಡಬೇಕು ಎಂದು ಮಂಡಳಿ ಇದೇ ವೇಳೆ ತಿಳಿಸಿದೆ.

ಹೊಸದಾಗಿ ಸಂಯೋಜಿತವಾಗಿರುವ ಶಾಲೆಗಳು ಪಾಸ್​ವರ್ಡ್​ ಸ್ವೀಕರಿಸದೇ ಹೋದಲ್ಲಿ ಶಾಲೆಯ ಕೋಡ್​ ಹಾಗೂ ಪಾಸ್​ವರ್ಡ್​ಗಳನ್ನು ಪಡೆಯಲು ಸಂಬಂಧಪಟ್ಟ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಿ ಎಂದು ಸಿಬಿಎಸ್​ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಹೊಸ ಶಾಲೆಗಳು ಒಎಐಎಸ್​ಐಎಸ್​ ಪೋರ್ಟಲ್​ನಲ್ಲಿ ತಮ್ಮ ಮಾಹಿತಿಯನ್ನು ಮೊದಲು ನೋಂದಾಯಿಸಬೇಕು. ಒಎಐಎಸ್​ಐಎಸ್​ ಮಾಹಿತಿಯನ್ನು ಅತ್ಯಂತ ಜಾಗರೂಕತೆಯಿಂದ ತುಂಬಬೇಕು. ಒಮ್ಮೆ ಅಧಿಕೃತಗೊಂಡ ಮಾಹಿತಿಯನ್ನು ಪುನಃ ಬದಲಾಯಿಸಲು ಸಾಧ್ಯವೇ ಇಲ್ಲ ಎಂದು ಸಿಬಿಎಸ್​ಇ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...