ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಹೊಸ ಮಾದರಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲಿದ್ದು, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.
ಮೊದಲ ಅವಧಿಯ 12 ನೇ ತರಗತಿ ಪರೀಕ್ಷೆ ನವೆಂಬರ್ 16 ರಿಂದ ಪ್ರಾರಂಭವಾಗುತ್ತದೆ, 10 ನೇ ತರಗತಿ ಪರೀಕ್ಷೆ ನವೆಂಬರ್ 17 ರಂದು ಪ್ರಾರಂಭವಾಗಲಿದೆ. ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ದೇಶಾದ್ಯಂತ ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಯಲಿದೆ.
ಮುಂದಿನ ವರ್ಷದ ಮಾರ್ಚ್-ಏಪ್ರಿಲ್‌ನಲ್ಲಿ ಎರಡನೇ ಅವಧಿಯ ಪರೀಕ್ಷೆ ನಡೆಯುವ ನಿರೀಕ್ಷೆಯಿದೆ. CBSE ಪ್ರಕಾರ, ಈ ಬಾರಿ ವಿದ್ಯಾರ್ಥಿಗಳಿಗೆ 15 ನಿಮಿಷಗಳ ಬದಲು 20 ನಿಮಿಷಗಳ ಓದುವ ಸಮಯ ನೀಡಲಾಗುತ್ತದೆ.
ಮೊದಲ ಅವಧಿಯು ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿದ್ದು, 90 ನಿಮಿಷಗಳ ಅವಧಿ ಇದೆ. ಪ್ರತಿ ಪ್ರಶ್ನೆ ನಾಲ್ಕು ಆಯ್ಕೆಗಳನ್ನು ಹೊಂದಿರುತ್ತದೆ. ಅದರಲ್ಲಿ ವಿದ್ಯಾರ್ಥಿಯು ಸರಿಯಾದದನ್ನು ಆಯ್ಕೆ ಮಾಡಬೇಕಿದೆ.
ಪ್ರತಿ ಉತ್ತರ ಪತ್ರಿಕೆಯನ್ನು ಸ್ಕ್ಯಾನ್ ಮಾಡುವುದರಿಂದ, ಯಾವುದೇ ಪ್ರಶ್ನೆಗೆ ಉತ್ತರಿಸದೆ ಬಿಡುವಂತಿಲ್ಲ. ವಿದ್ಯಾರ್ಥಿಗಳು ಉತ್ತರಿಸಲು ಬಯಸದಿದ್ದರೂ ಸಹ ಅವರು ಉತ್ತರವೊಂದನ್ನು ಆಯ್ಕೆ ಮಾಡಬೇಕಿದೆ. ಖ್ಯಾತ ಶಿಕ್ಷಣ ತಜ್ಞ ಪಿ.ಎಸ್. ಕಂಡ್ಪಾಲ್ ಇದೇ ಮಾದರಿಯಲ್ಲಿ ಹಲವು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.
10 ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಶರ್ಮಾ ಮಾತನಾಡಿ, ಎರಡು ಅವಧಿಗಳಲ್ಲಿ ಪರೀಕ್ಷೆ ನಡೆಯುತ್ತಿರುವುದು ಸಂತಸ ತಂದಿದೆ. ಇದರಿಂದ ಪಠ್ಯಕ್ರಮವನ್ನೂ ವಿಂಗಡಿಸಿದ್ದು, ಒತ್ತಡ ಕೂಡ ಕಡಿಮೆಯಾಗಿದೆ. ಹೊಸ ಪರೀಕ್ಷಾ ಮಾದರಿಯ ಬಗ್ಗೆಯೂ ಕುತೂಹಲ ಮೂಡಿದೆ ಎನ್ನುತ್ತಾರೆ. ಹನ್ನೆರಡನೇ ತರಗತಿ ವಿದ್ಯಾರ್ಥಿನಿ ಉಮಂಗ್ ಅಗರ್ ವಾಲ್, ಇದು ಹೊಸ ಮಾದರಿಯ ಪರೀಕ್ಷೆಯಾಗಿರುವುದರಿಂದ ಎದುರಿಸಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಇನ್ನೋರ್ವ ವಿದ್ಯಾರ್ಥಿನಿ ಸಂಚಿತಾ ದೀಕ್ಷಿತ್, ಪ್ರಶ್ನೆಗೆ ಉತ್ತರಿಸುವ ಸರಿಯಾದ ಮಾರ್ಗ ಸೇರಿದಂತೆ ಪರೀಕ್ಷೆಯ ಮಾದರಿಯ ಬಗ್ಗೆ ಎಲ್ಲರಿಗೂ ತಿಳಿಸಲಾಗಿದೆ. ಹೊಸ ಮಾದರಿಯೊಂದಿಗೆ ಪರೀಕ್ಷೆಗೆ ಹಾಜರಾಗಲು ನಾನು ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
CBSE ಪ್ರಕಾರ, 10 ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು 10 -10 ಅಂಕಗಳಂತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅದೇ ರೀತಿ 12 ನೇ ತರಗತಿಗೆ 15-15 ಅಂಕಗಳಾಗಿ ವಿಂಗಡಿಸಲಾಗಿದೆ. ಈ ಬಾರಿ ಕೋವಿಡ್ -19 ಕಾರಣದಿಂದಾಗಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಪರೀಕ್ಷಾ ಕೇಂದ್ರದಲ್ಲಿ ಬರೆಯಲು ಆಯ್ಕೆಯ ಅವಕಾಶ ನೀಡಲಾಗಿದ್ದು, ಅನೇಕರು ಪರೀಕ್ಷಾ ಕೇಂದ್ರ ಬದಲಿಸಿಕೊಂಡಿದ್ದಾರೆ. ಅನೇಕ ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಊರಿನಲ್ಲಿದ್ದು, ಅವರ ಶಾಲೆಗಳು ಬೇರೆ ಸ್ಥಳಗಳಲ್ಲಿವೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ 350 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಅವರ ನಡುವೆ ಆರು ಅಡಿ ಅಂತರ ಕಾಯ್ದುಕೊಳ್ಳಲಾಗುವುದು.
ಕೋವಿಡ್ -19 ಮಾರ್ಗಸೂಚಿಗಳ ಪ್ರಕಾರ, ಪ್ರತಿ ಮಗು ಮತ್ತು ಇನ್ವಿಜಿಲೇಟರ್ ಮಾಸ್ಕ್ ಧರಿಸಬೇಕು. ಮಂಡಳಿಯು ಬಿಡುಗಡೆ ಮಾಡಿದ ದಿನಾಂಕದ ಹಾಳೆಯ ಪ್ರಕಾರ, ಚಿಕ್ಕ ವಿಷಯಗಳಿಗೆ ನವೆಂಬರ್ 16-17 ರವರೆಗೆ ಮತ್ತು ಪ್ರಮುಖ ವಿಷಯಗಳಿಗೆ ಡಿಸೆಂಬರ್ 1 ರಿಂದ ಪರೀಕ್ಷೆ ನಡೆಯಲಿದೆ.
12 ನೇ ತರಗತಿ ವಿದ್ಯಾರ್ಥಿಗಳಿಗೆ, ಮೊದಲ ಪರೀಕ್ಷೆ ಸಮಾಜಶಾಸ್ತ್ರವಾಗಿರುತ್ತದೆ. ಗೃಹ ವಿಜ್ಞಾನ ಕೊನೆಯ ಪರೀಕ್ಷೆಯಾಗಿದೆ. ಬೆಳಗ್ಗೆ 11.30ಕ್ಕೆ ಆರಂಭವಾಗುವ ಪರೀಕ್ಷೆ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಗಲಿದೆ. 10 ನೇ ತರಗತಿಯ ಪ್ರಮುಖ ಪರೀಕ್ಷೆಗಳು ನವೆಂಬರ್ 30 ರಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 11 ರಂದು ಮುಗಿಯಲಿವೆ.
12 ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಡಿಸೆಂಬರ್ 3 – ಇಂಗ್ಲೀಷ್
ಡಿಸೆಂಬರ್ 6 – ಗಣಿತ
ಡಿಸೆಂಬರ್ 7 – ದೈಹಿಕ ಶಿಕ್ಷಣ
ಡಿಸೆಂಬರ್ 8 – ವ್ಯಾಪಾರ ಅಧ್ಯಯನ
ಡಿಸೆಂಬರ್ 9 – ಭೂಗೋಳ
ಡಿಸೆಂಬರ್ 10 – ಭೌತಶಾಸ್ತ್ರ
ಡಿಸೆಂಬರ್ 11 – ಮನೋವಿಜ್ಞಾನ
ಡಿಸೆಂಬರ್ 13 – ಅಕೌಂಟೆನ್ಸಿ
ಡಿಸೆಂಬರ್ 14 – ರಸಾಯನಶಾಸ್ತ್ರ
ಡಿಸೆಂಬರ್ 15 – ಅರ್ಥಶಾಸ್ತ್ರ
ಡಿಸೆಂಬರ್ 16 – ಹಿಂದಿ
ಡಿಸೆಂಬರ್ 17 – ರಾಜ್ಯಶಾಸ್ತ್ರ
ಡಿಸೆಂಬರ್ 18 – ಜೀವಶಾಸ್ತ್ರ
ಡಿಸೆಂಬರ್ 20 – ಇತಿಹಾಸ
ಡಿಸೆಂಬರ್ 21 – ಕಂಪ್ಯೂಟರ್ ಸೈನ್ಸ್
ಡಿಸೆಂಬರ್ 22 – ಹೋಮ್ ಸೈನ್ಸ್
10 ನೇ ತರಗತಿಗೆ ಪರೀಕ್ಷೆ ವೇಳಾಪಟ್ಟಿ
ನವೆಂಬರ್ 20 – ಸಮಾಜ ವಿಜ್ಞಾನ
ಡಿಸೆಂಬರ್ 2 – ವಿಜ್ಞಾನ
ಡಿಸೆಂಬರ್ 3 – ಹೋಮ್ ಸೈನ್ಸ್
ಡಿಸೆಂಬರ್ 4 – ಗಣಿತ
ಡಿಸೆಂಬರ್ 8 – ಕಂಪ್ಯೂಟರ್ ಅಪ್ಲಿಕೇಶನ್
ಡಿಸೆಂಬರ್ 9 – ಹಿಂದಿ
ಡಿಸೆಂಬರ್ 11 –ಇಂಗ್ಲಿಷ್