ನವದೆಹಲಿ: ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದ 12 ನೇ ತರಗತಿ ಫಲಿತಾಂಶವನ್ನು ಜುಲೈ 31 ರೊಳಗೆ ಪ್ರಕಟಿಸಲಾಗುವುದು. ಈ ಕುರಿತಾಗಿ ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿವೆ.
ಎರಡೂ ಮಂಡಳಿಗಳು ಪರೀಕ್ಷೆಗೆ ಪರ್ಯಾಯವಾಗಿ ಮೌಲ್ಯಮಾಪನ ನಡೆಸಲಿವೆ. ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಸಿದ್ಧಪಡಿಸಿದ ಮೌಲ್ಯಮಾಪನ ವಿಧಾನಕ್ಕೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಸಿಬಿಎಸ್ಇ ಮಂಡಳಿ 10, 11 ಮತ್ತು 12ನೇ ತರಗತಿಯಲ್ಲಿನ ಅಂಕಗಳ ಆಧಾರದಲ್ಲಿ 12 ನೇ ತರಗತಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದು, ಐಸಿಎಸ್ಇ ಮಂಡಳಿ ಹಿಂದಿನ 6 ವರ್ಷಗಳ ಅಂಕಗಳ ಆಧಾರದಲ್ಲಿ 12 ನೇ ತರಗತಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದೆ.
ಕೊರೋನಾ ಕಾರಣದಿಂದಾಗಿ 12 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಯಾವ ಆಧಾರದ ಮೇಲೆ ಫಲಿತಾಂಶ ನೀಡಲಾಗುತ್ತದೆ ಎಂಬುದರ ವಿವರ ನೀಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಿಬಿಎಸ್ಇ ಮತ್ತು ಐಸಿಎಸ್ಇ ಮೌಲ್ಯಮಾಪನ ಪ್ರಕ್ರಿಯೆ ವಿವರಗಳನ್ನು ತಿಳಿಸಿದ್ದು, ಜುಲೈ 31 ರೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿವೆ.