
ನವದೆಹಲಿ: ಏಪ್ರಿಲ್ 26 ರಿಂದ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆಗಳು ಆರಂಭವಾಗಲಿವೆ ಎಂದು ಸಿಬಿಎಸ್ಇ ಮಂಡಳಿ ತಿಳಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಿಬಿಎಸ್ಇ ವಾರ್ಷಿಕ ಪರೀಕ್ಷೆಯ ಬದಲಿಗೆ ಎರಡು ಹಂತದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದ ಪರೀಕ್ಷೆಗಳು ಹಿಂದೆಯೇ ಮುಗಿದಿವೆ. ಈಗ ಎರಡನೇ ಹಂತದ ಪರೀಕ್ಷೆ ಏಪ್ರಿಲ್ 26 ರಿಂದ ಆರಂಭವಾಗಲಿದೆ. ಒಂದೇ ದಿನ ಎರಡು ವಿಷಯಗಳ ಪರೀಕ್ಷೆ ನಡೆಸಲು ವೇಳಾಪಟ್ಟಿ ಸಿದ್ದಗೊಳಿಸಲಾಗಿದೆ.
ಜೆಇಇ ಮುಖ್ಯಪರೀಕ್ಷೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಸಿಬಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಸಿದ್ಧಪಡಿಸಲಾಗಿದ್ದು, ಏ. 26 ರಿಂದ ಆರಂಭವಾಗಲಿವೆ ಎನ್ನಲಾಗಿದೆ.