alex Certify CBSE 10 ಮತ್ತು 12 ನೇ ತರಗತಿ ಫಲಿತಾಂಶ ಪ್ರಕಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBSE 10 ಮತ್ತು 12 ನೇ ತರಗತಿ ಫಲಿತಾಂಶ ಪ್ರಕಟ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಇಂದು 12 ನೇ ತರಗತಿ ಮತ್ತು 10ನೇ ತರಗತಿ ಫಲಿತಾಂಶಗಳನ್ನು ಪ್ರಕಟಿಸಿದೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ – cbseresults.nic.in ಮತ್ತು cbse.digitallocker.gov.in ಹಾಗು cbse.gov.in ನಲ್ಲಿ ಫಲಿತಾಂಶಗಳನ್ನು ಪರಿಶೀಲಿಸಬಹುದು.

ಈ ವರ್ಷ 12 ನೇ ತರಗತಿಯ ಒಟ್ಟಾರೆ ಉತ್ತೀರ್ಣ ಶೇಕಡಾ 87.33 ರಷ್ಟಿದೆ, ಇದು ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಹುಡುಗಿಯರು ಶೇಕಡಾ 90.68 ರಷ್ಟು ಉತ್ತೀರ್ಣರಾಗುವುದರೊಂದಿಗೆ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಶೇಕಡಾ 84.67 ಹುಡುಗರು CBSE 12 ನೇ ತರಗತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. ತಿರುವನಂತಪುರವು ಅತ್ಯುತ್ತಮ ಫಲಿತಾಂಶದೊಂದಿಗೆ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಮತ್ತು ಚೆನ್ನೈ ನಂತರದ ಸ್ಥಾನದಲ್ಲಿದೆ.

CBSE ತರಗತಿಯ 12 ಪರೀಕ್ಷೆಗಳನ್ನು ಫೆಬ್ರವರಿ 15 ರಿಂದ ಏಪ್ರಿಲ್ 5 ರವರೆಗೆ ನಡೆಸಲಾಗಿತ್ತು. ಫಲಿತಾಂಶಗಳು UMANG ಆಪ್, ಡಿಜಿಲಾಕರ್‌ನಲ್ಲಿಯೂ ಲಭ್ಯವಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...