ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2021-22ರ ಶೈಕ್ಷಣಿಕ ವರ್ಷದ 10ನೇ ತರಗತಿಯ ಟರ್ಮ್ 1 ಪರೀಕ್ಷೆಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ನವೆಂಬರ್ 30ರಿಂದ ಡಿಸೆಂಬರ್ 11ರವರೆಗೂ ಬಹು ಆಯ್ಕೆಯ ಪ್ರಶ್ನೆಗಳ (ಎಂಸಿಕ್ಯೂ) ಫಾರ್ಮ್ಯಾಟ್‌ನಲ್ಲಿ ಟರ್ಮ್ 1 ಪರೀಕ್ಷೆ ಆಯೋಜಿಸಿರುವ ಸಿಬಿಎಸ್‌ಇಯ ಫಲಿತಾಂಶ ಘೋಷಣೆ ಮಾಡುವುದನ್ನು ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ.
10ನೇ ತರಗತಿ ಟರ್ಮ್ 1 ಪರೀಕ್ಷೆಗಳ ಕುರಿತಾಗಿ ಸಿಬಿಎಸ್‌ಇ ಯಾವುದೇ ಘೋಷಣೆ ಮಾಡಿಲ್ಲ. ಆದರೂ, ಮಾಧ್ಯಮಗಳ ಕೆಲವೊಂದು ವರದಿಗಳು, ಜನವರಿ 2022ರಲ್ಲಿ ಫಲಿತಾಂಶಗಳು ಹೊರಬರಲಿವೆ ಎನ್ನುತ್ತಿವೆ.
ಫಲಿತಾಂಶಗಳನ್ನು ಸಿಬಿಎಸ್‌ಇಯ ಅಧಿಕೃತ ಜಾಲತಾಣವಾದ cbse.gov.in ಅಥವಾ cbseresults.nic.inನಲ್ಲಿ ಬಿಡುಗಡೆ ಮಾಡಲಾಗುವುದು. ಎಸ್‌ಎಂಎಸ್, ಐವಿಆರ್‌ಎಸ್ ಮತ್ತು ಡಿಜಿ ಲಾಕರ್‌ಗಳ ಮುಖಾಂತರವೂ ಫಲಿತಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ.
2022ರ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶವು ಅಂಕಪಟ್ಟಿ, ಗ್ರೇಡ್ ಮತ್ತು ವರ್ಗಗಳನ್ನು ಹೊಂದಿರಲಿದೆ.