
ಸಿಬಿಎಸ್ಇ, 2022ರ ಬೋರ್ಡ್ ಪರೀಕ್ಷೆ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. 10 ಮತ್ತು 12ನೇ ತರಗತಿ ಪರೀಕ್ಷೆಗಾಗಿ ಶೀಘ್ರದಲ್ಲೇ ಪೋರ್ಟಲ್ ಆರಂಭಿಸಲಾಗುವುದು ಎಂದು ಮಂಡಳಿ ಹೇಳಿದೆ.
ಪೋರ್ಟಲ್, ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಸಿಬಿಎಸ್ಇ ಹೇಳಿದೆ. ಸಿಬಿಎಸ್‌ಇಗೆ ಸಂಯೋಜಿತವಾಗಿರುವ ಎಲ್ಲಾ ಶಾಲೆಗಳಿಗೆ, ವಿದ್ಯಾರ್ಥಿಗಳ ವಿವರಗಳನ್ನು ಸಲ್ಲಿಸಲು ಕೇಳಲಾಗುತ್ತದೆ ಎಂದು ಮಂಡಳಿ ಹೇಳಿದೆ. ವಿದ್ಯಾರ್ಥಿಗಳ ವಿವರಗಳನ್ನು ಪೋರ್ಟಲ್‌ನಲ್ಲಿ ತೋರಿಸಲಾಗುವುದು.
ವರದಿಯ ಪ್ರಕಾರ, ಸಿಬಿಎಸ್‌ಇ ಮಂಡಳಿಗೆ ಸೇರಿದ ಎಲ್ಲಾ ಶಾಲೆಗಳು 9 ನೇ ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳ ನೋಂದಣಿಗಾಗಿ ಈ ಹೊಸ ಪೋರ್ಟಲ್ ಬಳಸಲು ಸಾಧ್ಯವಾಗಲಿದೆ. ಈ ಸೌಲಭ್ಯಗಳನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೋರ್ಟಲ್ ಆರಂಭಿಸುವ ಮುನ್ನವೇ ಸಿಬಿಎಸ್‌ಇ ಶಾಲೆಗಳಿಗೆ ಮಾಹಿತಿ ನೀಡಲಾಗಿದೆ. ಈ ಹಿಂದೆ, ಕೊರೊನಾ ವೈರಸ್ ಸಮಯದಲ್ಲಿ ಸಿಬಿಎಸ್‌ಇ ಅಧಿಸೂಚನೆಯನ್ನು ಹೊರಡಿಸಿತ್ತು. ಶೈಕ್ಷಣಿಕ ಅವಧಿ 2021-22 ರ ಪರೀಕ್ಷೆಗಳನ್ನು ಎರಡು ಅವಧಿಗಳಲ್ಲಿ ನಡೆಸುವುದಾಗಿ ಘೋಷಿಸಿತ್ತು. ಅಧಿಕೃತ ಸೂಚನೆಯಂತೆ, ಅವಧಿ 1 ಪರೀಕ್ಷೆಯನ್ನು ನವೆಂಬರ್/ಡಿಸೆಂಬರ್ 2021 ಮತ್ತು ಅವಧಿ 2 ಪರೀಕ್ಷೆಯನ್ನು ಮಾರ್ಚ್/ಏಪ್ರಿಲ್ 2022 ರಲ್ಲಿ ನಡೆಸಲು ಉದ್ದೇಶಿಸಲಾಗಿದೆ.