
ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ -CBSE ಬೋರ್ಡ್ ಎಕ್ಸಾಮ್ಸ್ 2023 ಟೈಮ್ ಟೇಬಲ್ ಬಿಡುಗಡೆ ಮಾಡಿದೆ. 10, 12ನೇ ತರಗತಿಯ ಡೇಟ್‌ಶೀಟ್ ಅನ್ನು ಮಂಡಳಿ ಒಂದೇ ನೋಟೀಸ್‌ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು cbse.gov.in ನಲ್ಲಿ CBSE ಯ ಅಧಿಕೃತ ಸೈಟ್‌ನಲ್ಲಿ 10, 12 ನೇ ತರಗತಿಯ ವೇಳಾಪಟ್ಟಿ ಪರಿಶೀಲಿಸಬಹುದು.
10 ನೇ ತರಗತಿ ಪರೀಕ್ಷೆಯ ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ. ಮಾರ್ಚ್ 21, 2023 ರಂದು ಕೊನೆಗೊಳ್ಳುತ್ತದೆ. 12 ನೇ ತರಗತಿ ಪರೀಕ್ಷೆಯು ಫೆಬ್ರವರಿ 15 ರಂದು ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 5, 2023 ರಂದು ಕೊನೆಗೊಳ್ಳುತ್ತದೆ. 10, 12 ನೇ ತರಗತಿಯ ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಗಿ ಮಧ್ಯಾಹ್ನ 1.30ಕ್ಕೆ ಮುಕ್ತಾಯವಾಗಲಿದೆ.
ಅಧಿಕೃತ ಸೂಚನೆಯ ಪ್ರಕಾರ, ಮಂಡಳಿಯು ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಟ್ಟುಕೊಂಡು ವೇಳಾಪಟ್ಟಿ ಸಿದ್ಧಪಡಿಸಿದೆ. ಸಿಬಿಎಸ್‌ಇ 10, 12ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಓದಲು 15 ನಿಮಿಷಗಳ ಓದುವ ಸಮಯವನ್ನು ನೀಡುತ್ತದೆ. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು CBSE ಯ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.