ಈ ವರ್ಷ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಬದಲಾವಣೆ ಮಾಡಲಾಗಿದೆ. 2 ಅವಧಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. 10ನೇ ತರಗತಿಯ ಮೊದಲ ಟರ್ಮ್ ಪರೀಕ್ಷೆ ಈಗಾಗಲೇ ಶುರುವಾಗಿದೆ. ಪ್ರಮುಖ ವಿಷಯಗಳ ಪರೀಕ್ಷೆ ನವೆಂಬರ್ 30 ರಿಂದ ಪ್ರಾರಂಭವಾಗಲಿದೆ.
12ನೇ ತರಗತಿಯ ಟರ್ಮ್ 1 ಬೋರ್ಡ್ ಪರೀಕ್ಷೆಗಳು ಡಿಸೆಂಬರ್ ಒಂದರಿಂದ ಶುರುವಾಗಲಿದೆ. ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಯಾರಿ ಶುರು ಮಾಡಿದ್ದಾರೆ. ಬೋರ್ಡ್ ಪರೀಕ್ಷೆ ಎಂದಾಗ ಸಾಮಾನ್ಯವಾಗಿ ಭಯವಿರುತ್ತದೆ. ಎಲ್ಲ ಉತ್ತರ ಬರೆದಿದ್ದರೂ, ಸಣ್ಣ ತಪ್ಪಿನಿಂದ ವಿದ್ಯಾರ್ಥಿಗಳು ಅಂಕ ಕಳೆದುಕೊಳ್ಳುತ್ತಾರೆ. ಹಾಗಾಗಿ ಬೋರ್ಡ್ ಪರೀಕ್ಷೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಐಪಿಎಲ್ 2022ರ ವೇಳಾಪಟ್ಟಿ ಪ್ರಕಟ: ಮೊದಲ ಪಂದ್ಯದಲ್ಲಿ ಮೈದಾನಕ್ಕಿಳಿಯಲಿದ್ದಾರೆ ಧೋನಿ
ಪರೀಕ್ಷೆಯ ಪತ್ರಿಕೆಯನ್ನು ಸರಿಯಾಗಿ ಓದಬೇಕು : ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದುವುದಿಲ್ಲ. ಪ್ರಶ್ನೆ ಪತ್ರಿಕೆಯನ್ನು ಸರಿಯಾಗಿ ಓದಿಲ್ಲವೆಂದ್ರೆ ಪ್ರಶ್ನೆ ಅರ್ಥವಾಗುವುದಿಲ್ಲ. ಉತ್ತರ ಬಂದಿದ್ದರೂ, ಪ್ರಶ್ನೆ ಅರ್ಥವಾಗದೆ ಅನೇಕರು ಉತ್ತರ ಬರೆಯುವುದಿಲ್ಲ.
ಹ್ಯಾಂಡ್ ರೈಟಿಂಗ್ : ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೈಗೆ ಸಿಗ್ತಿದ್ದಂತೆ ವಿದ್ಯಾರ್ಥಿಗಳು ಒತ್ತಡ, ಆತುರಕ್ಕೊಳಗಾಗ್ತಾರೆ. ಸಮಯಕ್ಕೆ ಸರಿಯಾಗಿ ಎಲ್ಲ ಉತ್ತರ ಬರೆಯಬೇಕೆಂಬ ಕಾರಣಕ್ಕೆ ತರಾತುರಿಯಲ್ಲಿ ಉತ್ತರ ಬರೆಯಲು ಶುರು ಮಾಡುತ್ತಾರೆ. ಇದ್ರಿಂದ ದುಂಡನೆಯ ಅಕ್ಷರ ಸಾಧ್ಯವಿಲ್ಲ. ಅಕ್ಷರ ಕೆಟ್ಟದಾಗಿದ್ದರೆ, ಉತ್ತರ ಸರಿಯಿದ್ದರು ಅಂಕ ಸಿಗುವುದಿಲ್ಲ. ಹಾಗಾಗಿ ಅಕ್ಷರಕ್ಕೂ ಗಮನ ನೀಡಬೇಕು.
ಕೋಳಿ ಸತ್ತಿದ್ದಕ್ಕೆ ನೆರೆಮನೆಯವನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಕುಕ್ಕುಟೋದ್ಯಮಿ..!
ಅನಾವಶ್ಯಕ ಸಮಯ ವ್ಯರ್ಥ : ಕೆಲವೊಂದು ಪ್ರಶ್ನೆಗೆ ಉತ್ತರ ತಿಳಿದಿರುವುದಿಲ್ಲ. ಮುಂದೆ ಉತ್ತರ ಗೊತ್ತಿರುವ ಪ್ರಶ್ನೆಗಳಿದ್ದರೂ, ಬರದ ಪ್ರಶ್ನೆಗೆ ಉತ್ತರ ಹುಡುಕುತ್ತ ಸಮಯ ಹಾಳು ಮಾಡುತ್ತಾರೆ. ಹಾಗೆ ಮಾಡದೆ ಬರುವ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು.
ಉತ್ತರ ಪತ್ರಿಕೆ ಪರಿಶೀಲನೆ : ಪ್ರಶ್ನೋತ್ತರ ಬರೆದ ನಂತ್ರ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳು ನೋಡುವುದಿಲ್ಲ. ಪತ್ರಿಕೆಯನ್ನು ಪರಿಷ್ಕರಿಸುವುದು ಬಹಳ ಮುಖ್ಯ. ಆಗ ತಪ್ಪುಗಳು ಕಾಣಿಸುತ್ತವೆ. ಅದನ್ನು ಅಲ್ಲಿಯೇ ತಿದ್ದುವ ಪ್ರಯತ್ನ ನಡೆಸಬಹುದು.