alex Certify CBSE ನಲ್ಲಿ 500 ಕ್ಕೆ 500 ಅಂಕ ಪಡೆದ ವಿದ್ಯಾರ್ಥಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

CBSE ನಲ್ಲಿ 500 ಕ್ಕೆ 500 ಅಂಕ ಪಡೆದ ವಿದ್ಯಾರ್ಥಿ

ಕೇಂದ್ರೀಯ ಪಠ್ಯಕ್ರಮ ಸಿಬಿಎಸ್​ಇ ನೋಯ್ಡಾದ ಮಯಾಂಕ್​ ಯಾದವ್​ 500ಕ್ಕೆ 500 ಅಂಕ ಪಡೆದು ಅಗ್ರಸ್ಥಾನಿ ಎನಿಸಿಕೊಂಡಿದ್ದಾನೆ.

ಸೆಂಟ್ರಲ್​ ಬೋರ್ಡ್​ ಆಫ್​ ಸೆಕೆಂಡರಿ ಎಜುಕೇಶನ್​ 2022ನೇ ಸಾಲಿನ 10 ಹಾಗೂ 12ನೇ ತರಗತಿ ಫಲಿತಾಂಶವನ್ನು ಜುಲೈ 22 ರಂದು ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗಿದೆ. ನೋಯ್ಡಾದ ಅಮಿಟಿ ಇಂಟರ್​ನ್ಯಾಶನಲ್​ ಸ್ಕೂಲ್​ನ ಮಯಾಂಕ್​ ಯಾದವ್​ ಶೇ.100 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿದ್ದಾನೆ.

ಈ ವರ್ಷ ಒಟ್ಟು 20,93,978 ವಿದ್ಯಾರ್ಥಿಗಳು ಸಿಬಿಎಸ್​ಇ 10 ನೇ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. ಒಟ್ಟು 19,76,668 ಮಂದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಈ ವರ್ಷ ಕೂಡ ಬಾಲಕಿಯರು ಬಾಲಕರಿಗಿಂತ ಶೇ.1.41ರಷ್ಟು ಉತ್ತಮ ಸಾಧನೆ ಮಾಡಿದ್ದಾರೆ.

2,36,993 ವಿದ್ಯಾರ್ಥಿಗಳು ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಮತ್ತು 64,908 ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳ ಡಿಜಿಲಾಕರ್​ ಖಾತೆಗಳಿಗೆ ಆರು-ಅಂಕಿಯ ಭದ್ರತಾ ಪಿನ್​ ಆಧಾರಿತ ಆಕ್ಟಿವೇಷನ್​ ನೀಡಿದೆ. ವಿದ್ಯಾರ್ಥಿವಾರು ಸೆಕ್ಯುರಿಟಿ ಪಿನ್ ಫೈಲ್ ಅನ್ನು ಸಿಬಿಎಸ್​ಇ ಸಂಯೋಜಿತ ಶಾಲೆಗಳಿಗೆ ಅವರ ಡಿಜಿಲಾಕರ್​ ಖಾತೆಗಳಲ್ಲಿ ನೀಡಲಾಗಿದೆ, ಅಲ್ಲಿ ಶಾಲೆಗಳು ಅದನ್ನು ಡೌನ್​ಲೋಡ್​ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...