ಸಿಬಿಎಸ್ಇ ಶಿಕ್ಷಣವನ್ನ ನೀಡುತ್ತಿರುವ ಶಾಲೆಗಳಿಗೆ 10ನೇ ತರಗತಿ ವಿದ್ಯಾರ್ಥಿಗಳ ಅಂಕಪಟ್ಟಿಯನ್ನ ಮಂಡಳಿಗೆ ಸಲ್ಲಿಸಲು ಇದು ಕೊನೆಯ ದಿನವಾಗಿದೆ. ಸಿಬಿಎಸ್ಇ ಬೋರ್ಡ್ ಮೇ 18ರಂದು ಈ ಗಡುವನ್ನ ಜೂನ್ 30ರವರೆಗೆ ವಿಸ್ತರಣೆ ಮಾಡಿತ್ತು.
ವಿದ್ಯಾರ್ಥಿಗಳ ಅಂಕಗಳನ್ನ ಜೂನ್ 30ರೊಳಗಾಗಿ ಸಿಬಿಎಸ್ಇ ಬೋರ್ಡ್ಗೆ ಸಲ್ಲಿಕೆ ಮಾಡಬೇಕು. ಫಲಿತಾಂಶದ ಕಮಿಟಿಯು ಸಿಬಿಎಸ್ಇ ನೀಡಿರುವ ಯೋಜನೆಗಳನ್ನ ಆಧರಿಸಿ ತಮ್ಮದೇ ಆದ ವೇಳಾಪಟ್ಟಿ ಮಾಡಬಹುದು ಎಂದು ಸಿಬಿಎಸ್ಇ ಪರೀಕ್ಷಾ ನಿಯಂತ್ರಕ ಸದಸ್ಯ ಭಾರದ್ವಾಜ್ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ನೀಡಬೇಕಾದ ಅಂಕಗಳನ್ನ ಅಂತಿಮ ಮಾಡಲು ಪ್ರಾಂಶುಪಾಲರು ಹಾಗೂ 7 ಶಿಕ್ಷಕರನ್ನೊಳಗೊಂಡ ಫಲಿತಾಂಶ ಸಮಿತಿಯನ್ನ ರಚನೆ ಮಾಡುವಂತೆ ಸಿಬಿಎಸ್ಇ ಸಂಬಂಧಪಟ್ಟ ಶಾಲೆಗಳಿಗೆ ಸೂಚನೆಯನ್ನ ನೀಡಿತ್ತು. ಈ ಸಮಿತಿಯಲ್ಲಿ ಆಯಾ ಶಾಲೆಯ ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಇಬ್ಬರು ಭಾಷಾ ಶಿಕ್ಷಕರು ಇರಬೇಕು. ಇದರ ಜೊತೆಯಲ್ಲಿ ಅನ್ಯ ಶಾಲೆಯ ಇಬ್ಬರು ಶಿಕ್ಷಕರನ್ನ ಈ ಸಮಿತಿಗೆ ಸೇರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿತ್ತು.