ಹಂತ 1 : ಸಿಬಿಎಸ್ಇ ಅಧಿಕೃತ ವೆಬ್ಸೈಟ್ ಖಾತೆಗೆ ಭೇಟಿ ನೀಡಿ.
ಹಂತ 2 : ಸ್ಕ್ರಾಲ್ ಡೌನ್ ಮಾಡಿ ಕೆಳಗೆ ಕಾಣುವ ‘ ರೋಲ್ ನಂಬರ್ ಫೈಂಡರ್’ ಮೇಲೆ ಕ್ಲಿಕ್ ಮಾಡಿ.
ಹಂತ 3: ಈಗ ಒಂದು ಹೊಸ ಪೇಜ್ ನಿಮ್ಮ ಮುಂದೆ ತೆರೆದುಕೊಳ್ಳಲಿದೆ. ಇಲ್ಲಿ ನೀವು ಕಂಟಿನ್ಯೂ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4 : ನಿಮ್ಮ ತರಗತಿಯನ್ನು ಆಯ್ಕೆ ಮಾಡಿ. ( 10 ಅಥವಾ 12)
ಹಂತ 5: ನಿಮ್ಮ ಹೆಸರು, ತಂದೆಯ ಹೆಸರು, ಶಾಲೆಯ ಕೋಡ್, ಹುಟ್ಟಿದ ದಿನಾಂಕ ಹಾಗೂ ತಾಯಿಯ ಹೆಸರನ್ನು ನಮೂದಿಸಿ.
ಹಂತ 6: ಸರ್ಚ್ ಡೇಟಾ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ರೋಲ್ ನಂಬರ್ನ್ನು ಪರಿಶೀಲನೆ ಮಾಡಿ.
ಸಿಬಿಎಸ್ಇ ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ನ್ನು ತಿಳಿದುಕೊಳ್ಳೋದು ಪ್ರಮುಖವಾಗಿದೆ. ಸಿಬಿಎಸ್ಇ ಬೋರ್ಡ್ ಶೀಘ್ರದಲ್ಲೇ ಅಂದರೆ 12ನೇ ತರಗತಿ ಫಲಿತಾಂಶ ಇಂದು ಮದ್ಯಾಹ್ನ 2 ಗಂಟೆಗೆ 10ನೇ ತರಗತಿ ಫಲಿತಾಂಶ ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳು ರೋಲ್ ನಂಬರ್ನ್ನು ಇಟ್ಟುಕೊಂಡಿರಲೇಬೇಕು.